ಮಂಡ್ಯ: ಪ್ರಧಾನಿ ಕುರ್ಚಿಯಲ್ಲಿ ಕೂತಿರೋ ಮೋದಿಗೆ ಯಾರಾದ್ರೂ ಸಮಸ್ಯೆ ಹೇಳಿ ಪತ್ರ ಬರೆದ್ರೆ ಅದಕ್ಕೆ ತಕ್ಷಣ ಸ್ಪಂದಿಸ್ತಾರೆ. ಹೀಗೆ ಮಂಡ್ಯದ ಯುವತಿ ಸಾರಾ ಎಂಬಾಕೆಯ ಮನಸ್ಸುನ್ನು ಮೋದಿ ಗೆದ್ದಿದ್ದಾರೆ.
ಸಾರಾ ತನ್ನ ಎಂಬಿಎ ವ್ಯಾಸಂಗಕ್ಕೆ ಲೋನ್ ಕೊಡೋಕೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ನಿರಾಕರಿಸಿದಾಗ ಆಕೆ ಸಹಾಯ ಯಾಚಿಸಿ ಮೋದಿಗೆ ಪತ್ರ ಬರೆದಿದ್ದರು. ಹತ್ತೇ ದಿನದಲ್ಲಿ ಪ್ರಧಾನಿ ಕಚೇರಿಯಿಂದ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸಹಾಯ ಮಾಡುವಂತೆ ಪತ್ರ ಬಂದಿತ್ತು. ಆದ್ರೂ ಸೆಂಟ್ರಲ್ ಬ್ಯಾಂಕ್‍ನವರು ಸಾಲ ಕೊಟ್ಟಿರಲಿಲ್ಲ. ಕೊನೆಗೆ ಮೋದಿ ಪತ್ರ ಗಮನಿಸಿದ ವಿಜಯ್ ಬ್ಯಾಂಕ್‍ನವರು ಸಾರಾಗೆ ಲೋನ್ ಕೊಟ್ರು.
Advertisement
Advertisement
ಸದ್ಯ ಸಾರಾ ಎಂಬಿಎ ಪದವಿ ಓದುತ್ತಿದ್ದು, ಇಂದು ಹುಟ್ಟು ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ, ಪ್ರಧಾನಿಯವರು ಸಹಾಯ ಮಾಡಿರುವುದು ನನಗೊಬ್ಬಳಿಗೆ ಅಲ್ಲ. ಇಂತಹ ಅನೇಕ ಉದಾಹರಣೆಗಳಿವೆ. 125 ಕೋಟಿ ಜನ ಇರೋ ಈ ದೇಶದಲ್ಲಿ ಪ್ರತಿಯೊಬ್ಬರ ಪತ್ರಕ್ಕೆ ಪ್ರತಿಕ್ರಿಯಿಸುತ್ತಾರೆ ಅಂದ್ರೆ ನಿಜಕ್ಕೂ ಅವರೊಬ್ಬರು ಗ್ರೇಟ್ ಲೀಡರ್. ಇದೇ ರೀತಿ ನಾಲ್ಕು ಮಂದಿ ಲೀಡರ್ ಆದ್ರೆ ಭಾರತ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತ ಹೇಳಿದ್ರು.
Advertisement
ಹುಟ್ಟುಹಬ್ಬ ಆಚರಣೆ: ಇನ್ನು ಪ್ರಧಾನಿಯವರ ಹುಟ್ಟು ಹಬ್ಬದ ಪ್ರಯುಕತ ಮಂಡ್ಯ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಸ್ವಚ್ಚಗೊಳಿಸುವ ಮೂಲಕ ಮಂಡ್ಯ ಬಿಜೆಪಿ ಕಾರ್ಯಕರ್ತರು ವಿಶೇಷವಾಗಿ ಪ್ರಧಾನಿ ಮೋದಿಯವರ ಹುಟ್ಟು ಹಬ್ಬ ಆಚರಿಸಿದ್ರು.
ಬೆಳ್ಳಂಬೆಳಗ್ಗಯೇ ಬಸ್ ನಿಲ್ದಾಣಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಮೋದಿಯವರಿಗೆ ಜೈಕಾರ ಕೂಗಿ ಹುಟ್ಟು ಹಬ್ಬದ ಶುಭ ಕೋರಿದ್ರು. ನಂತ್ರ ಶೌಚಾಲಯಕ್ಕೆ ತೆರಳಿ ಸ್ವಚ್ಚಗೊಳಿಸಿದ್ರು. ಶೌಚಾಲಯ ಸ್ವಚ್ಚಗೊಳಿಸಿದ ನಂತ್ರ ಪ್ರಯಾಣಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದ್ರು.