ಮಂಡ್ಯ: ಪಿಡಿಓಗಳನ್ನು ಶ್ರೀರಂಗಪಟ್ಟಣದ ಇಓ ಹಣ ನೀಡುವಂತೆ ಪೀಡಿಸುವುದರ ಜೊತೆಗೆ ಕಿರುಕುಳ ನೀಡುತ್ತಿದ್ದ ಆಡಿಯೋ ಮತ್ತು ವೀಡಿಯೋ ವೈರಲ್ ಆಗಿದೆ.
ಶ್ರೀರಂಗಪಟ್ಟಣದ ಇಓ ಬೈರಪ್ಪ ಆರೋಪಿ. ಇವರು ಪಿಡಿಓಗಳಿಗೆ ಕಾಮಗಾರಿಗಳ ಬಿಲ್‍ನಲ್ಲಿ 30% ಕಮಿಷನ್ ನೀಡುವಂತೆ ಪೀಡಿಸುತ್ತಿರುವ ವಿಡಿಯೋ ಮತ್ತು ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ವೀಡಿಯೋದಲ್ಲಿ ಪಿಡಿಓಗಳು ಪದೇ ಪದೇ ಹಣ ನೀಡಿದರೂ ಇಷ್ಟು ಹಣ ಸಾಕಗಲ್ಲ. ಇನ್ನೂ ಅಧಿಕ ಹಣಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಪಿಡಿಓಗಳು ಹಣ ನೀಡಲಿಲ್ಲ ಎಂದರೆ ಬಿಲ್ ಪಾಸ್ ಆಗದ ರೀತಿಯಲ್ಲಿ ಇಓ ವರ್ತನೆ ಮಾಡುತ್ತಿದ್ದಾರೆ. ಜೊತೆಗೆ ನಾನು ಸಿಇಓಗೂ ಹಣ ನೀಡಬೇಕು ಎಂದು ಆಡಿಯೋದಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಈ ರೀತಿಯ ದೌರ್ಜನ್ಯಕ್ಕೆ ಪಿಡಿಓಗಳು ಬೇಸತ್ತು ಮಂಡ್ಯ ಜಿಲ್ಲಾ ಪಂಚಾಯತಿ ಸಿಇಓ ದಿವ್ಯಾ ಪ್ರಭು ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಪಿಡಿಓಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು – ಮಹಿಳೆ ಸಾವು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯಿತಿ ಸಿಇಓ ದಿವ್ಯ ಪ್ರಭು ಅವರು, ಈ ಬಗ್ಗೆ ಪಿಡಿಓಗಳು ದೂರು ನೀಡಿದ್ದಾರೆ. ನಾವು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ರಚಿಸಿದ್ದೇವೆ. ಅವರು ಈ ಬಗ್ಗೆ ವರದಿ ನೀಡಿದ್ದಾರೆ. ಇಓ ಭೈರಪ್ಪ ಅವರು ಹಣಕ್ಕಾಗಿ ಪಿಡಿಸುತ್ತಿರುವುದು ನಿಜ ಎಂದು ವರದಿಯಲ್ಲಿ ಹೇಳಿದ್ದಾರೆ. ಹೀಗಾಗಿ ನಾನು ಸರ್ಕಾರಕ್ಕೆ ಈ ವರದಿಯನ್ನು ಕಳಿಸಿ ಅವರನ್ನು ಅಮಾನತು ಮಾಡಬೇಕೆಂದು ತಿಳಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಿಮಗೆ ಪ್ರವೇಶವಿಲ್ಲ – ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಗೇಟ್‍ನಲ್ಲೇ ತಡೆದ ಪ್ರಿನ್ಸಿಪಾಲ್