ಮಂಡ್ಯ: ನಗರದ ಎಸ್ಪಿ ರಾಧಿಕಾ ನಿವಾಸದಲ್ಲಿ ಆರ್ಡಲಿ ಪದ್ಧತಿ ಇದ್ದು, ತಮ್ಮ ಮನೆ ಕೆಲಸಕ್ಕೆ 18 ಜನ ಪೇದೆಗಳ ನಿಯೋಜನೆ ಆಗಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ನಿವಾಸದ ಗಾರ್ಡನ್ ಮತ್ತು ಬಟ್ಟೆ ತೊಳೆಯುವ ಕೆಲಸಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜನೆಯಾಗಿದ್ದು, ತಮ್ಮ ಮನೆ ಕೆಲಸಕ್ಕೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಆದರೆ ಸ್ವತಃ ಅವರೇ ಈ ಬಗ್ಗೆ ಮಾತನಾಡಿದ್ದು, ನಾನು ಅನಧಿಕೃತವಾಗಿ ಯಾವುದೇ ಸಿಬ್ಬಂದಿಗಳಿಂದ ನಮ್ಮ ಮನೆ ಕೆಲಸ ಮಾಡಿಸುತ್ತಿಲ್ಲ ಎಂದು ಎಸ್‍ಪಿ ರಾಧಿಕಾ ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಸರ್ಕಾರ ಓರ್ವ ಉನ್ನತ ಅಧಿಕಾರಿಯ ಸಹಾಯಕ್ಕಾಗಿ ಕೊಟ್ಟಿರುವ ಸೌಲಭ್ಯವನ್ನೆ ಬಳಸಿಕೊಳ್ಳುತ್ತಿದ್ದೇನೆ. ಸಹಾಯಕರಿಲ್ಲದೆ ಓರ್ವ ಅಧಿಕಾರಿಯಾಗಿ ಹೇಗೆ 24 ಗಂಟೆ ಕೆಲಸ ಮಾಡೋದು, ಕೊಟ್ಟಿರುವ ಸಿಬ್ಬಂದಿಗಳಿಂದ ನಾನು ಯಾವುದೇ ನನ್ನದಾಗಲಿ, ನನ್ನ ಮನೆಯದಾಗಲಿ ಅಥವಾ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳುತ್ತಿಲ್ಲ. ಫೋನ್ ರಿಸೀವ್ ಮಾಡಲು, ಭದ್ರತೆ ನೀಡಲು ಮತ್ತು ಕಚೇರಿ ಸಹಾಯಕ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿದೆ ಅಷ್ಟೆ ಎಂದು ಹೇಳಿದ್ದಾರೆ.
Advertisement
ಇದೇ ವೇಳೆ ಯಾರೋ ನಮ್ಮ ಇಲಾಖೆಯವರೇ ಆಗದವರು ಈ ರೀತಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಮೂಡಿಸಿದ್ದಾರೆ. ನಮ್ಮಲ್ಲಿ ಆ ರೀತಿ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ ಮಾಲಿ ಕೆಲಸ ಮಾಡಿಸುತ್ತಿಲ್ಲ. ಗೊಂದಲ ಸೃಷ್ಟಿಸುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತಿಳಿಸಿದ್ದಾರೆ.
Advertisement