ಮಂಡ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ನೇಮಕ ವಿಚಾರ ಬಗೆಹರಿಯುವಂತೆ ಕಾಣುತ್ತಿಲ್ಲ. ಇದರಿಂದ ಸರ್ಕಾರ ಹಾಗೂ ಗೃಹ ಇಲಾಖೆ ವಿರುದ್ಧ ಸಾರ್ವಜನಿಕರು ಎಸ್‍ಪಿ ಹುದ್ದೆ ಹರಾಜಿಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಎಸ್‍ಪಿ ಅವರನ್ನು ವರ್ಗಾವಣೆ ಮಾಡಿ ಒಂದು ವಾರ ಕಳೆದರೂ ಬೇರೆ ಎಸ್‍ಪಿ ನೇಮಕ ಮಾಡದೆ ಹುದ್ದೆ ಖಾಲಿ ಉಳಿದಿದ್ದು, ಎಸ್‍ಪಿ ಹುದ್ದೆ ಬಿಕರಿಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಾರ್ವಜನಿಕರು ಮಂಡ್ಯ ಎಸ್‍ಪಿ ಹುದ್ದೆ ಹರಾಜಿಗಿದೆ. ಹೆಚ್ಚು ಬಿಡ್ ಕೂಗಿದವರಿಗೆ ಸರ್ಕಾರ ಆದೇಶ ಬರಲಿದೆ. ಭ್ರಷ್ಟ ಕೆಎಸ್‍ಪಿಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಸುವರ್ಣಾವಕಾಶ ಎಂಬ ಪೋಸ್ಟ್ ಹರಿದಾಡುತ್ತಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಡಿಕ್ಕಿ – ಸವಾರನನ್ನು ಒದ್ದು ಕೊಂದ ಕಿರಾತಕ
Advertisement
Advertisement
ಕಳೆದ ಅ.20 ರಂದು ಎಸ್‍ಪಿಯಾಗಿದ್ದ ಡಾ.ಎಂ.ಅಶ್ವಿನಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅವರ ಜಾಗಕ್ಕೆ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿದ್ದ ಸುಮನ್ ಡಿ.ಪನ್ನೇಕರ್ ಅವರನ್ನು ನೇಮಿಸಿತ್ತು. ಆದರೆ ಅಧಿಕಾರ ಪಡೆಯುವ ಮುನ್ನವೇ ಗೃಹ ಇಲಾಖೆ ತಡೆ ನೀಡಿತ್ತು. ಆದರೆ ಅಶ್ವಿನಿ ಅವರು ಅ.21ರಂದೇ ಎಎಸ್‍ಪಿ ವಿ.ಧನಂಜಯ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದರು. ಇದನ್ನೂ ಓದಿ: ಪಟಾಕಿ ನಿಷೇಧಿಸಿದರೆ ನಿರ್ದಿಷ್ಟ ಸಮುದಾಯ ವಿರೋಧಿ ಎಂದರ್ಥವಲ್ಲ- ಸುಪ್ರೀಂ ಕೋರ್ಟ್
Advertisement