ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಲು ಮುರಿದು ರೈಲ್ವೆ ಹಳಿ ಬಳಿ ನರಳಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ.
ಏಪ್ರಿಲ್ 11 ರಂದು ಸಂಜೆ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ರೈಲಿಗೆ ಸಿಲುಕಿ ಆಂಧ್ರ ಮೂಲದ ಕಿಶೋರ್ ಎಂಬವರ ಎಡಗಾಲು ಮುರಿದು ಹೋಗಿತ್ತು. ಈ ವೇಳೆ ಕಿಶೋರ್ ನೋವಿಗೆ ನರಳಾಡಿದ್ದಾರೆ. ಜೊತೆಗೆ ಸಹಾಯಕ್ಕೆಂದು ಕೆಲ ನಿಮಿಷ ಅಂಗಲಾಚಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ವ್ಯಕ್ತಿಯನ್ನು ರಕ್ಷಣೆ ಮಾಡಲು ಮುಂದಾಗಿಲ್ಲ.
ಇದನ್ನೂ ಓದಿ: ಅಪಘಾತದಲ್ಲಿ ಎರಡೂ ಕಾಲುಗಳು ಕಟ್ ಆದ್ರೂ ಆಸ್ಪತ್ರೆಗೆ ಸೇರಿಸದೇ ವಿಡಿಯೋ ಮಾಡಿದ್ರು!
ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ರೂ ಯುವಕನಿಗೆ ಯಾರೂ ಸಹಾಯ ಮಾಡಲಿಲ್ಲ!
ಸ್ಥಳಕ್ಕೆ ಬಂದ ರೈಲ್ವೆ ಪೊಲೀಸ್ರು ಗಾಯಗೊಂಡಿದ್ದ ಕಿಶೋರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊದಲು ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಂತ್ರ ಹೆಚ್ಚಿನ ಚಿಕಿತ್ಸೆಗೆಂದು ಕಿಶೋರ್ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇದನ್ನೂ ಓದಿ: ಮರೆಯಾಯ್ತು ಮಾನವೀಯತೆ- 12ರ ಬಾಲಕ ಜೀವನ್ಮರಣ ಹೋರಾಡ್ತಿದ್ರೂ ಸಹಾಯಕ್ಕೆ ಬರ್ಲಿಲ್ಲ ಜನ