ಮಾಲೀಕನನ್ನ ಅರಸಿ 1,790 ಕಿಮೀ ಪ್ರಯಾಣ – ಚಿಕ್ಕ ವಯಸ್ಸಲ್ಲೇ ಮಂಡ್ಯದ ಪಾರಿವಾಳ ದಾಖಲೆ

Public TV
1 Min Read
Mandya pigeon

ಮಂಡ್ಯ: ಪಾರಿವಾಳ ರೇಸ್ ಎಂಬುದು ಹಲವರಿಗೆ ದೊಡ್ಡ ಕ್ರೇಜ್. ಕೆಲವರು ಈ ಪಾರಿವಾಳ ರೇಸ್‌ಗೆಂದೇ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ. ಕೋಟಿ ಕೋಟಿ ಹಣ ಕೊಟ್ಟು ಸಾಮರ್ಥ್ಯವುಳ್ಳ ಪಾರಿವಾಳಗಳನ್ನೂ ಖರೀದಿ ಮಾಡ್ತಾರೆ. ಇಂತಹ ರೇಸ್‌ನಲ್ಲಿ ಪಾಲ್ಗೊಂಡಿದ್ದ ಮಂಡ್ಯದ ಪಾರಿವಾಳವೊಂದು ಅತಿ ಚಿಕ್ಕ ವಯಸ್ಸಿನಲ್ಲೇ ದಾಖಲೆ ಬರೆದಿದೆ.

ಹೌದು. ದೆಹಲಿಯಿಂದ (Dehli) ಮಂಡ್ಯಕ್ಕೆ (Mandya) 1,790 ಕಿ.ಮೀ ಪ್ರಯಾಣ ಮಾಡಿದ ಒಂದು ವರ್ಷದ ಪಾರಿವಾಳವೊಂದು ಮಾಲೀಕನ ಬಳಿ ವಾಪಸ್ಸಾಗಿ ದಾಖಲೆ ನಿರ್ಮಿಸಿದೆ.ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್ ಕಾರ್ಡ್‌ ‌ರಹಸ್ಯ ಬಯಲು; ವಾರಸುದಾರರು ಪತ್ತೆ

ಕರ್ನಾಟಕ (Karnataka) ಹೋಮಿಂಗ್ ಪಿಜನ್ ಫೆಡರೇಷನ್ ಅವರು ದೆಹಲಿಯಲ್ಲಿ ಪಾರಿವಾಳಗಳ ರೇಸ್‌ನ್ನು ಆಯೋಜಿಸಿದ್ದರು. ಇದರಲ್ಲಿ ಮಂಡ್ಯದ ವಿ.ಸಿ ಫಾರಂನ ಶ್ರೀಧರ್ ಅವರಿಗೆ ಸೇರಿದ ಅಭಿಮನ್ಯು ಹೆಸರಿನ ಪಾರಿವಾಳವೊಂದು ಸತತ 52 ದಿನಗಳ ಹಾರಾಟ ನಡೆಸಿದ ಪಾರಿವಾಳ ದೆಹಲಿಯಿಂದ ಮಂಡ್ಯಕ್ಕೆ ಬಂದಿದೆ.

ಈ ಸ್ಪರ್ಧೆಯಲ್ಲಿ ಕರ್ನಾಟಕ, ತಮಿಳುನಾಡಿನ ಮೂಲದ ಒಟ್ಟು 22 ಪಾರಿವಾಳ ಭಾಗವಹಿಸಿದ್ದವು. ಪಾರಿವಾಳಗಳಿಗೆ ರೇಸ್‌ಗೂ ಮುನ್ನ ರಿಂಗ್ ಅಳವಡಿಕೆ ಮಾಡಲಾಗಿತ್ತು. ಏ.5ರಂದು ಎಲ್ಲಾ ಪಾರಿವಾಳಗಳನ್ನು ಹಾರಿಬಿಡಲಾಗಿತ್ತು. ಅಂದಿನಿಂದ ಒಟ್ಟು 1790 ಕಿ.ಮೀ ಹಾರಾಟ ನಡೆಸಿ ಮೇ.28ರಂದು ಅಭಿಮನ್ಯು ಮಾಲೀಕನ ಬಳಿಗೆ ಬಂದಿದೆ.

ಒಟ್ಟು 22 ಪಾರಿವಾಳಗಳ ಪೈಕಿ 14 ಪಾರಿವಾಳಗಳು ತಮ್ಮ ನೆಲೆಗೆ ವಾಪಸ್ಸಾಗಿದ್ದು, ಅದರಲ್ಲಿ ಅತಿ ಚಿಕ್ಕ ವಯಸ್ಸಿನ ಮಂಡ್ಯದ ಅಭಿಮನ್ಯು ದಾಖಲೆ ನಿರ್ಮಿಸಿದೆ. ಮೊದಲ ರೇಸ್‌ನಲ್ಲಿ ಯಶಸ್ಸು ಕಂಡ ಅತಿ ಚಿಕ್ಕ ಪಾರಿವಾಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಕೇಸ್ – ಇಂದೇ ತೀರ್ಪು?

Share This Article