ಮಂಡ್ಯ: ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಮೋದಿ ಸಂಪುಟದಲ್ಲಿ ಸಚಿವರಾಗಿ (Modi Cabinet Minister) ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದೀಗ ಮಂಡ್ಯದ (Mandya) ಜನರು ಕುಮಾರಸ್ವಾಮಿ ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಕುಮಾರಸ್ವಾಮಿ ಮಂಡ್ಯದಲ್ಲಿನ ಚುನಾವಣೆ ಪ್ರಚಾರದ ವೇಳೆ ನಾನು ಸಂಸದನಾದರೇ ಕಾವೇರಿ ವಿವಾದ (Cauvery Water Dispute) ಪ್ರಾಮಾಣಿಕವಾಗಿ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಹೆಚ್‌ಡಿಕೆ ಮುಂದೆ ಈ ಸವಾಲು ಪ್ರಮುಖವಾಗಿದೆ. ಅಲ್ಲದೇ ನನ್ನ ಎಂಪಿ ಅವಧಿ ಮುಗಿಯುವ ಹೊತ್ತಿಗೆ ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತಂದೇ ತರುತ್ತೇನೆ ಎಂಬ ಭರವಸೆಯನ್ನೂ ಮಂಡ್ಯದ ಜನತೆಗೆ ನೀಡಿದ್ದರು. ಈ ಮಾತನ್ನು ಕುಮಾರಸ್ವಾಮಿ ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಕೋಟಿ ಕೋಟಿ ಬೆಟ್ಟಿಂಗ್ – ಕಾಂಗ್ರೆಸ್ ಕಾರ್ಯಕರ್ತ ಬಲಿ
Advertisement
Advertisement
ಇನ್ನೂ ಕುಮಾರಸ್ವಾಮಿ ಅವರಿಗೆ ಯಾವ ಖಾತೆ ಎಂದು ನಿಗದಿಯಾಗಿಲ್ಲ. ಸದ್ಯ ಕೃಷಿ ಖಾತೆಯ ನಿರೀಕ್ಷೆಯಲ್ಲಿ ಕುಮಾರಸ್ವಾಮಿ ಅವರು ಇದ್ದಂತೆ ಕಾಣಿಸುತ್ತಿದೆ. ಮಂಡ್ಯ ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆಯಾದ್ದರಿಂದ ಕೃಷಿಯ ವಿಚಾರದಲ್ಲಿ ಇಲ್ಲಿನ ರೈತರು ಹಲವು ಭರವಸೆಗಳನ್ನು ಕುಮಾರಸ್ವಾಮಿ ಮೇಲೆ ಇಟ್ಟುಕೊಂಡಿದ್ದಾರೆ. ಹೆಚ್‌ಡಿಕೆ ಮಂಡ್ಯ ಜಿಲ್ಲೆಯ ಕೃಷಿಗೆ ಆಧುನಿಕ ಟಚ್ ನೀಡುವಲ್ಲಿ ಮುಂದಾಗಾಬೇಕಾಗಿದ್ದು, ಕೃಷಿ ಉದ್ಯಮಗಳನ್ನು ಜಿಲ್ಲೆಯಲ್ಲಿ ತೆರೆಯಬೇಕಾಗಿದೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್ – ಜೂನ್ 24ರ ವರೆಗೆ ಪ್ರಜ್ವಲ್ ರೇವಣ್ಣಗೆ ಜೈಲು!
Advertisement
Advertisement
ಅಲ್ಲದೇ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಕೇಂದ್ರದ ಬಳಿ ಕುಮಾರಸ್ವಾಮಿ ಒತ್ತಡ ಹಾಕಬೇಕಾಗಿದೆ. ಇನ್ನೂ ಮಂಡ್ಯ ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದ ಹಾಗೂ ಇತರ ಕಾರ್ಖಾನೆಗಳನ್ನು ತಂದು ನಿರುದ್ಯೋಗ ಸಮಸ್ಯೆ ಹೋಗಲಾಡಿಸಬೇಕಿದೆ. ಅಲ್ಲದೇ ಕೇಂದ್ರ ಸಚಿವ ಸ್ಥಾನದ ಕೆಲಸದ ಜೊತೆ ಮಂಡ್ಯ ಜಿಲ್ಲೆಯ ಜನರ ಕೈಗೆ ಕುಮಾರಸ್ವಾಮಿ ಅವರು ಸಿಗಬೇಕಾಗಿದೆ. ಇದನ್ನೂ ಓದಿ: ಮಾಸಾಂತ್ಯಕ್ಕೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ: ಈಶ್ವರ ಖಂಡ್ರೆ