– ಸಮಗ್ರ ಕನ್ನಡ ಭಾಷಾ ಬಳಕೆ ಕಾಯ್ದೆ ಜಾರಿಗೆ ಸರ್ಕಾರ ಬದ್ಧ
– ಖಾಸಗಿ ಮತ್ತು ಸರ್ಕಾರಿ ವಲಯದ ಉತ್ಪನ್ನಗಳ ಮೇಲೆ ಕಡ್ಡಾಯ ಕನ್ನಡ ಮುದ್ರಣವಾಗಬೇಕು
ಮಂಡ್ಯ: ಜಗತ್ತಿನ ಯಾರೇ ಬಂದರೂ ಅವರಿಗೆ ಕನ್ನಡ ಕಲಿಸುತ್ತೇವೆ ಎಂಬ ದಿಟ್ಟತನ ಮಂಡ್ಯ (Mandya) ಜನರದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.
Advertisement
ಸಕ್ಕರೆ ನಾಡು ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಕ್ಕರೆ ನಾಡು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನದಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದೇನೆ. ಈ ಸಮ್ಮೇಳನ ಕನ್ನಡದ ಹಬ್ಬ. ಮಂಡ್ಯ ಜಿಲ್ಲೆ ಕನ್ನಡ ಸಾಹಿತ್ಯ ಪರಂಪರೆಯನ್ನು ಮೆರೆಸಿದೆ. ಜಗತ್ತಿನ ಯಾರೇ ಬಂದರೂ ಅವರಿಗೆ ಕನ್ನಡ ಕಲಿಸುತ್ತೇವೆ ಎಂಬ ದಿಟ್ಟತನವನ್ನು ಈ ಜನರು ಹೊಂದಿದ್ದಾರೆ. ಸತ್ಯಾಗ್ರಹ ಸೌಧ ಈ ಭಾಗದ ಧೈರ್ಯ, ಶೌರ್ಯವನ್ನು ಪ್ರತಿಬಿಂಬಿಸುತ್ತದೆ. ಈ ಜಿಲ್ಲೆ ಅಪ್ಪಟ ಕನ್ನಡಿಗರನ್ನು ಹೊಂದಿದ್ದು, ಜಾತ್ಯತೀತ ಈ ನೆಲದ ಗುಣವಾಗಿದೆ. ಕನ್ನಡ ಭಾಷೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.ಇದನ್ನೂ ಓದಿ: 4 ಜಿಲ್ಲೆ, 50ಕ್ಕೂ ಹೆಚ್ಚು ಗ್ರಾಮ, 14 ಗಂಟೆ ಅಲೆದಾಡಿಸಿದ್ರು.. ಪೊಲೀಸರು ದೌರ್ಜನ್ಯ ಎಸಗಿದ್ರು: ನೋವು ಹೇಳಿಕೊಂಡ ಸಿ.ಟಿ.ರವಿ
Advertisement
Advertisement
ಮನೆಯ ಒಡವೆ ಮಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೆಆರ್‌ಎಸ್ ಕಟ್ಟಿಸಿದ್ದರು. ಕೆಆರ್‌ಎಸ್ ಕಟ್ಟುವಾಗ ಟಿಪ್ಪು ಸುಲ್ತಾನ್ ಸ್ಮರಿಸಿದರು. ಆಧುನಿಕ ಮಂಡ್ಯದ ನಿರ್ಮಾಣದಲ್ಲಿ ಮೈಸೂರು ಅರಸರು, ಹೈದರಾಲಿ, ಟಿಪ್ಪು ಸುಲ್ತಾನ್ ಅವರನ್ನು ಮರೆಯುವಂತಿಲ್ಲ. ವಿಶ್ವವೇ ಜಾಗತಿಕ ಹಳ್ಳಿಯಾಗಿರುವಾಗ ನಮ್ಮತನವನ್ನು ಬಿಟ್ಟುಕೊಡಬಾರದು. ಭಾಷೆ ಉಳಿಯುವುದು, ಬೆಳೆಯುವುದು ಅದನ್ನು ಬಳಸಿದಾಗ ಮಾತ್ರ. ನುಡಿಬಿಟ್ಟರೇ ನಾಡು ಬಿಟ್ಟಂತೆ ಭಾಷೆಗೇಡಿ ದೇಶಗೇಡಿಯಂತೆ. ಬಳಸದೆ ಹೋದರೆ ಭಾಷೆಯ ಅಸ್ತಿತ್ವ ಮತ್ತು ಬೆಳವಣಿಗೆಗೆ ಅಪಾಯವಾಗುತ್ತದೆ. ಕನ್ನಡದ ಅಸ್ಮಿತೆಗೆ ಉಂಟಾಗುವ ಸಮಸ್ಯೆ ಗುರುತಿಸಿ, ಪರಿಹಾರ ಕಂಡುಕೊಳ್ಳಲು ಸಮ್ಮೇಳನ ಸಹಾಯಕಾರಿಯಾಗುತ್ತದೆ. ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮವಾಗಿರಬೇಕು. ಅವರದೇ ಭಾಷೆಯಲ್ಲಿ ಮಾತನಾಡುವುದನ್ನು ಬಿಟ್ಟು, ಇದು ನಿನ್ನ ಭಾಷೆ, ದೇಶ ಭಾಷೆ, ಸಾವಿರಾರು ವರ್ಷಗಳ ಸುಪುಷ್ಪ, ಸಾಹಿತ್ಯ ಭಾಷೆ ಎಂದು ಕುವೆಂಪುರವರ ಸಾಲು ನೆನೆದು ಮಾತನಾಡಿದರು.
Advertisement
ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೃಹತ್ ವೇದಿಕೆಯಲ್ಲಿ ಚಾಲನೆ ನೀಡಿ, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆಯೆಂದು ಹೆಸರು ಪಡೆದಿರುವ, ಸಕ್ಕರೆ ನಗರಿ ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಆಯೋಜಿಸಿರುವ 87ನೇ ಅಖಿಲ ಭಾರತ… pic.twitter.com/RVOYKtDvoc
— Siddaramaiah (@siddaramaiah) December 20, 2024
ವಿಧಾನಸೌಧದ ಆವರಣದಲ್ಲಿ ನಾಡದೇವಿ ಭುವನೇಶ್ವರಿಯ 25 ಅಡಿ ಪ್ರತಿಮೆಯಿದೆ. ಕರ್ನಾಟಕ ಸಾಹಿತ್ಯಿಕವಾಗಿ ಸಮೃದ್ಧ ಇತಿಹಾಸ ಹೊಂದಿದೆ. ಕರ್ನಾಟಕ 8 ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದೆ. ಕನ್ನಡ ಡಿಜಿಟಲೀಕರಣ ಆರಂಭಿಸಲಾಗಿದೆ. ಸಮಗ್ರ ಕನ್ನಡ ಭಾಷಾ ಬಳಕೆ ಕಾಯ್ದೆ ಜಾರಿಗೆ ಹಾಗೂ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಎಷ್ಟೇ ಭಾಷೆ ಕಲಿತರು ಹೃದಯದ ಭಾಷೆ ಕನ್ನಡವಾಗಿರಬೇಕು. ಮಾತೃಭಾಷೆ ಶಿಕ್ಷಣಕ್ಕೆ ಒತ್ತುನೀಡಬೇಕು. ಖಾಸಗಿ ಮತ್ತು ಸರ್ಕಾರಿ ವಲಯದ ಉತ್ಪನ್ನಗಳ ಮೇಲೆ ಕಡ್ಡಾಯ ಕನ್ನಡ ಮುದ್ರಣವಾಗಬೇಕು ಎಂದು ತಿಳಿಸಿದರು.
ಸಾಹಿತ್ಯ ಜನಜೀವನದ ಪ್ರತಿಬಿಂಬವಾಗಿಬೇಕು. ಸಾಹಿತಿಗಳು ಜನಸಾಮಾನ್ಯರ ನೋವು ನಲಿವನ್ನು ಬರಹದ ಮೂಲಕ ಹಿಡಿದಿಡಬೇಕು. ಜಗತ್ತಿನ ಮಹತ್ವದ ಕೃತಿಗಳನ್ನು ತುರ್ತಾಗಿ ಕನ್ನಡಕ್ಕೆ ಅನುವಾದ ಮಾಡಬೇಕು. ವೈಜ್ಞಾನಿಕ, ವೈಚಾರಿಕ ದೃಷ್ಟಿಯಿಂದ ಪರಿಶೀಲಿಸಬೇಕು. ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನ ಮಾಮೂಲಿ ಸಮ್ಮೇಳನವಾಗದೇ ನಾಡಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಮ್ಮೇಳನವಾಗಬೇಕು. ದ್ವೇಷವಾದಿ ಶಕ್ತಿಗಳು ಮಂಡ್ಯದಲ್ಲಿ ವಿಷ ಬಿತ್ತಲು ಪ್ರಯತ್ನಿಸಿದರು. ಆದರೆ ಸಿಹಿ ಬೆಳೆಯುವ ಮಂಡ್ಯದವರು ವಿಷಹಾಕಲು ಬಂದವರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. ಇತಿಹಾಸದಲ್ಲಿ ಮತ್ತೊಮ್ಮೆ ಮಂಡ್ಯದವರು ಸಿಹಿ ನೀಡುವವರು ವಿಷ ನೀಡುವವರಲ್ಲ ಎಂದು ಸಾಬೀತು ಮಾಡಿದ್ದೀರಿ ಎಂದು ಮಂಡ್ಯದ ಜನರನ್ನು ಕೊಂಡಾಡಿದರು.ಇದನ್ನೂ ಓದಿ: ಒಂದೇ ರಾತ್ರಿ 8ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ – 3.87 ಲಕ್ಷ ಮೌಲ್ಯದ ವಸ್ತು ಲೂಟಿ