ಮಂಡ್ಯ: ರೆಬಲ್ ಸ್ಟಾರ್ ಅಂಬರೀಶ್ ಅಂತ್ಯಸಂಸ್ಕಾರಕ್ಕೆ ಬಾರದ ನಟಿ, ಮಾಜಿ ಸಂಸದೆ ರಮ್ಯಾ ವಿರುದ್ಧ ಮಂಡ್ಯ ಜನರು ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ರಮ್ಯಾ ಇಂದು ಮಂಡ್ಯ ಜನತೆಯ ಪಾಲಿಗೆ ಇಂದು ನಿಧನರಾಗಿದ್ದಾರೆ ಎಂಬ ಸಾಲುಗಳನ್ನು ಬರೆದುಕೊಳ್ಳುತ್ತಿದ್ದಾರೆ.
ಅಂಬಿ ಅಂತಿಮ ದರ್ಶನ ಪಡೆಯಲು ಮಂಡ್ಯಕ್ಕೆ ಬಾರದ ರಮ್ಯಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಮಂಡ್ಯದಲ್ಲಿ ರಮ್ಯಾ ವಿರುದ್ಧ ಆಕ್ರೋಶ ಮುಂದುವರೆದಿದೆ. ಅಂಬರೀಶ್ ಅವರು ರಮ್ಯಾಗೆ ರಾಜಕೀಯವಾಗಿ ದಾರಿ ತೋರಿಸಿದ್ದಾರೆ. ಹೀಗಾಗಿ ಅಂಬಿ ಅಂತಿಮ ದರ್ಶನಕ್ಕಾದರೂ ರಮ್ಯಾ ಮಂಡ್ಯಕ್ಕೆ ಬರಬೇಕಿತ್ತು. ಅಲ್ಲದೇ ಓರ್ವ ಮಂಡ್ಯದ ಮಗಳಾಗಿ ರಮ್ಯಾ ಆಗಮಿಸಬೇಕಿತ್ತು. ಆದರೆ ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಅಂಬರೀಶ್ ವಿರುದ್ಧವೇ ಇನ್ನೂ ದ್ವೇಷ ಸಾಧಿಸುತ್ತಿದ್ದಾರೆ ಅಂತ ಕೆಲವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಮ್ಯಾಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ಜನತೆ
Advertisement
Advertisement
ಅಂಬಿ ನಿಧನರಾಗಿ ಒಂದು ದಿನ ಕೂಡ ಅಂತಿಮ ದರ್ಶನಕ್ಕೆ ರಮ್ಯಾ ಬಂದಿಲ್ಲ. ಘಟಾನುಘಟಿ ನಾಯಕರು, ಸಿನಿಮಾ ತಾರೆಯರು ಬಂದು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ. ರಮ್ಯಾ ಅವರೆಲ್ಲರಿಗಿಂತ ಬ್ಯುಸಿ ಇದ್ದಾರಾ ಎಂದು ಪ್ರಶ್ನಿಸುವ ಮೂಲಕ ಅಂಬಿ ಅಭಿಮಾನಿಗಳು ರಮ್ಯಾ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
Advertisement
Advertisement
ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ರಮ್ಯಾ ಗೆಲುವಲ್ಲಿ ಅಂಬರೀಶ್ ಪ್ರಮುಖ ಪಾತ್ರ ವಹಿಸಿದ್ದರು. ಅಂಬಿಯಂತೆ ರಮ್ಯಾ ಕೂಡ ಚಿತ್ರರಂಗ, ರಾಜಕೀಯ ಎರಡೂ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಅಲ್ಲದೇ ಇಬ್ಬರೂ ಮಂಡ್ಯದವರೇ. ಹೀಗಾಗಿ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ತಂದಾಗ ರಮ್ಯಾ ಕೂಡ ತವರು ಜಿಲ್ಲೆಗೆ ಬಂದು ಅಂತಿಮ ದರ್ಶನ ಪಡೆಯುತ್ತಾರೆ ಅಂತ ಅಭಿಮಾನಿಗಳು ನಂಬಿದ್ದರು. ಕಳೆದ ಎರಡು ವರ್ಷದಿಂದ ಮಂಡ್ಯ ಕಡೆ ಆಗಮಿಸದ ರಮ್ಯಾ, ಅಂಬಿ ಅಂತಿಮ ದರ್ಶನ ಪಡೆಯಲು ಮಂಡ್ಯಕ್ಕೆ ಆಗಮಿಸದಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಕಾರಣರಾಗಿದ್ದಾರೆ.
Extremely saddened to hear of the passing of Ambareesh uncle. May his soul rest in peace. My condolences to his family. Will always remember him fondly.
— Ramya/Divya Spandana (@divyaspandana) November 24, 2018
ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ(Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
https://www.youtube.com/watch?v=Mjhjp0vXrLY&feature=youtu.be
https://www.youtube.com/watch?v=vpV25SEDROE
https://www.youtube.com/watch?v=ei5fso60PsU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv