KRSನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ

Public TV
1 Min Read
KRS MANDYA

ಮಂಡ್ಯ: ಕಾವೇರಿ ನೀರಿಗಾಗಿ (Cauvery River Water) ತಮಿಳುನಾಡು (Tamil Nadu) ಸುಪ್ರೀಂ ಕೋರ್ಟ್ ಮೊರೆ ಹೋದ ಬೆನ್ನಲ್ಲೇ ಕೆಆರ್‍ಎಸ್ (KRS) ಡ್ಯಾಂನಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರ ಕೆಆರ್‍ಎಸ್ ಡ್ಯಾಂನಿಂದ 5,243 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಇಂದು 8,590 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಜೂನ್ ಹಾಗೂ ಜುಲೈನ 28.84 ಟಿಎಂಸಿ ನೀರು ಬಿಡಿಸುವಂತೆ ಸುಪ್ರೀಂ ಕೋರ್ಟ್‍ಗೆ ತಮಿಳುನಾಡು ಅರ್ಜಿ ಸಲ್ಲಿಸಿತ್ತು. ಅರ್ಜಿಯ ಬೆನ್ನಲ್ಲೇ ಕಾವೇರಿ ನೀರಾವರಿ ನಿಗಮ ನೀರು ಬಿಡುಗಡೆ ಮಾಡಿದೆ. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ: ಸಚಿವ ಭೋಸರಾಜ್

ಸದ್ಯ 49.452 ಟಿಎಂಸಿ ಸಾಮಥ್ರ್ಯದ ಕೆಆರ್‍ಎಸ್ ಡ್ಯಾಂನಲ್ಲಿ 33.570 ಟಿಎಂಸಿ ಮಾತ್ರ ನೀರಿದೆ. ಡ್ಯಾಂನ ಒಳಹರಿವು 4,753 ಕ್ಯೂಸೆಕ್ ಇದೆ. ತಮಿಳುನಾಡಿಗೆ ಬಿಡುತ್ತಿರುವ ನೀರು 8,590 ಟಿಎಂಸಿ, ನಾಲೆಗಳಿಗೆ 2,366 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ: ಉರ್ದು ಶಾಲೆಯಲ್ಲಿ ಉಲ್ಟಾ ಹಾರಿದ ತ್ರಿವರ್ಣ ಧ್ವಜ – ರಾಷ್ಟ್ರ ಪ್ರೇಮಿಗಳ ಆಕ್ರೋಶ

ಕೆಆರ್‍ಎಸ್ ಡ್ಯಾಂ ನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 111.80 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 33.570 ಟಿಎಂಸಿ
ಒಳಹರಿವು – 4,753 ಕ್ಯೂಸೆಕ್
ಹೊರಹರಿವು – 10,956 ಕ್ಯೂಸೆಕ್

Web Stories

Share This Article