– ಸಾಲ ತೀರಿಸಲು ದರೋಡೆಗೆ ಇಳಿದಿದ್ದ
ಮಂಡ್ಯ: ಕ್ಯಾತನಹಳ್ಳಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮದ್ ಇಬ್ರಾಹಿಂ ವಿಚಾರಣೆ ವೇಳೆ ಶಾಕಿಂಗ್ ವಿಚಾರ ಬಾಯ್ಬಿಟ್ಟಿದ್ದಾನೆ. ಕೊಲೆಗಡುಕನ ಹಿನ್ನೆಲೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
Advertisement
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನಿವಾಸಿಯಾಗಿರುವ ಆರೋಪಿ ಇಬ್ರಾಹಿಂ, ಆನ್ಲೈನ್ ಗೇಮ್ ಸುಳಿಗೆ ಸಿಲುಕಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಮಾಡಿದ ಸಾಲ ತೀರಿಸಲು ದರೋಡೆಗೆ ಪ್ಲ್ಯಾನ್ ಮಾಡಿದ್ದ. ದರೋಡೆಗಾಗಿ ಮರ ಕತ್ತರಿಸುವ ಯಂತ್ರದೊಂದಿಗೆ ಮನೆಯೊಂದಕ್ಕೆ ಬಂದಿದ್ದ. ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನಕ್ಕಿಳಿದಿದ್ದ. ಇದನ್ನೂ ಓದಿ: ಮರ ಕತ್ತರಿಸುವ ಯಂತ್ರದಿಂದ ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಬರ್ಬರ ಹತ್ಯೆ – ಅಪರಿಚಿತನಿಂದ ಕೃತ್ಯ
Advertisement
Advertisement
ಕ್ಯಾತನಹಳ್ಳಿಗೂ ಮುನ್ನ ಕೆನ್ನಾಳು ಗ್ರಾಮದಲ್ಲಿ ದರೋಡೆಗೆ ಯತ್ನಿಸಿದ್ದ. ಮನೆಯಲ್ಲಿ ಹೆಚ್ಚು ಜನ ಹಾಗೂ ಸಿಸಿಟಿವಿ ಇದ್ದಿದ್ದರಿಂದ ಅಲ್ಲಿಂದ ವಾಪಸಾಗಿದ್ದ. ಬಳಿಕ ಕ್ಯಾತನಹಳ್ಳಿ ಬಳಿಯ ಒಂಟಿ ಮನೆಗೆ ಬಂದಿದ್ದ. ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದ್ದ ತೋಟದ ಮನೆಯಲ್ಲಿ ವಯಸ್ಸಾದ ದಂಪತಿ ಇದ್ದಿದ್ದರಿಂದ ಕೊಲೆಗೈದು ದರೋಡೆಗೆ ಯತ್ನಿಸಿದ್ದ. ಗಂಭೀರ ಗಾಯದ ನಡುವೆಯೂ ಯಶೋದಮ್ಮ ಮನೆಯಿಂದ ಹೊರಬಂದು ಬಾಗಿಲು ಲಾಕ್ ಮಾಡಿದ್ದರು. ಇತ್ತ ಮನೆಯ ಒಳಗೆಯಿಂದ ರಮೇಶ್ ಬರ್ಬರ ಹತ್ಯೆ ಮಾಡಿದ್ದಾನೆ. ಮನಸೋ ಇಚ್ಛೆ ಮರ ಕತ್ತರಿಸುವ ಯಂತ್ರದಿಂದ ರಮೇಶ್ ಕೊಲೆ ಮಾಡಿದ್ದಾನೆ.
Advertisement
ತೋಟದ ಮನೆಯಲ್ಲಿ ಭೀಕರ ಕೊಲೆ ನಡೆದಿದೆ. ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪತ್ನಿ ಮೇಲೆ ಸಂಶಯ – ಆಡಿಯೋ ಕೇಳಿ ಮಹಿಳೆಯ ಬರ್ಬರ ಹತ್ಯೆ!