– ತಿಥಿ ಕಾರ್ಯಕ್ಕೆ ಬರುವಂತೆ ಮನವಿ
ಮಂಡ್ಯ: ನನ್ನ ಅಣ್ಣ ಇಷ್ಟೊಂದು ಜನ ಸಂಪಾದಿಸಿದ್ದಾನೆ ಎಂದು ಗೊತ್ತಿರಲಿಲ್ಲ ಎಂದು ಆನಂದ್ ಅವರು ಸಹೋದರ ಹುತಾತ್ಮ ಯೋಧ ಗುರು ಅವರನ್ನು ನೆನೆಪಿಸಿಕೊಂಡು ಭಾವುಕರಾದ್ರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅಣ್ಣನ ಅಂತಿಮ ದರ್ಶನಕ್ಕೆ ಎಲ್ಲರಿಗೂ ಅವಕಾಶ ಸಿಗಲಿಲ್ಲ. ಚಿತೆಯ ಮೇಲೆ ಮಲಗಿಸಿದಾಗ ಕೊನೆಯದಾಗಿ ನಮಗೆ ಮಾತ್ರ ಮುಖ ದರ್ಶನಕ್ಕೆ ಅವಕಾಶ ಮಾಡಿಕೊಟ್ರು. ಆದ್ರೆ ಗುರುವಿಗೆ ಹೆಣ್ಣುಕೊಟ್ಟ ಅತ್ತೆ ಮಾವನಿಗೂ ಮುಖ ದರ್ಶನಕ್ಕೆ ಅವಕಾಶ ಸಿಗಲಿಲ್ಲ ಅಂದ್ರು.
Advertisement
Advertisement
ಈ ಬಗ್ಗೆ ನೆಂಟರಿಸ್ಟರು ದುಃಖಪಟ್ಟರು. ಮನೆಯ ಹಿರಿಮಗನ ಮುಖ ದರ್ಶನ ಕೊನೆಗೂ ಆಗಲಿಲ್ಲ ಎಂದು ಕಂಬನಿ ಮಿಡಿದು ನಿನ್ನೆಯ ಸನ್ನಿವೇಶ ನೆನದು ದುಃಖಿಸಿದ್ರು. ಇದೇ ವೇಳೆ ಹನ್ನೊಂದನೇ ದಿನಕ್ಕೆ ತಿಥಿ ಕಾರ್ಯ ಇದೆ. ಎಲ್ರೂ ಬನ್ನಿ ಎಂದು ಆನಂದ್ ಮನವಿ ಮಾಡಿದ್ರು.
Advertisement
ಅಪಾರ ಜನಸಾಗರದ ಕಣ್ಣೀರ ವಿದಾಯದೊಂದಿಗೆ ಹುತಾತ್ಮ ಯೋಧ ಗುರು ಅವರು ಶನಿವಾರ ರಾತ್ರಿ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಗುರು ಇಲ್ಲದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದೆ. 3 ದಿನಗಳಿಂದ ರೋಧಿಸಿ ರೋಧಿಸಿ ಸುಸ್ತಾಗಿದ್ದ ಕಲಾವತಿ, ನಿದ್ದೆಯಲ್ಲೂ ಪತಿಯನ್ನೇ ಕನವರಿಸ್ತಿದ್ದಾರೆ. ಅವರ ಮನೆ, ರಸ್ತೆಗಳು ಬಿಕೋ ಅಂತಿದೆ. ಆ ಗ್ರಾಮದ ಜನರಲ್ಲೂ ಏನೋ ಒಂದನ್ನು ಕಳೆದುಕೊಂಡ ಭಾವನೆ ಕಾಡ್ತಿದೆ. ಈ ನಡ್ವೆ, ಬೆಳ್ಳಂಬೆಳಗ್ಗೆಯೇ ಗುಡಿಗೆರೆ ಕಾಲೊನಿ ನಿವಾಸಕ್ಕೆ ಮಿಲಿಟರಿ ಅಧಿಕಾರಿಗಳು ಭೇಟಿ ಕೊಟ್ಟು, ಹುತಾತ್ಮರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
Advertisement
ಅಂತ್ಯಕ್ರಿಯೆ ಬಳಿಕ ಅತ್ತೆ, ಮಾವ ಅಂದ್ರೆ ಕಲಾವತಿ ತಂದೆ-ತಾಯಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥ ಅತ್ತೆ ಜಯಮ್ಮ, ಮಾವ ಶಿವಣ್ಣಗೆ ಮದ್ದೂರಿನ ಕೆಎಂ ದೊಡ್ಡಿಯಲ್ಲಿರುವ ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
https://www.youtube.com/watch?v=B9rOIgx736A
https://www.youtube.com/watch?v=m1D69xXhDFA
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv