ಮಂಡ್ಯ: ಮದ್ಯದ ಅಮಲಿನಲ್ಲಿದ್ದ ಕುಡುಕ ತಾನೂ ಸೇದಿದ ಬೀಡಿಯಿಂದಲೇ ಗುಡಿಸಲು ಜೊತೆ ಸುಟ್ಟು ಕರಕಲಾಗಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಚಾಮನಹಳ್ಳಿಯಲ್ಲಿ ಜರುಗಿದೆ.
ಚಾಮನಹಳ್ಳಿ ಗ್ರಾಮದ ಕೃಷ್ಣಯ್ಯ ಚಿಕ್ಕ ಗುಡಿಸಲಿನಲ್ಲಿ ವಾಸವಾಗಿದ್ದ. ಪ್ರತಿದಿನ ಕುಡಿಯುವ ಅಭ್ಯಾಸವನ್ನ ಹೊಂದಿದ್ದ. ಅದೇ ರೀತಿ ಸೋಮವಾರ ರಾತ್ರಿ ಕುಡಿದ ಅಮಲಿನಲ್ಲಿದ್ದ ಕೃಷ್ಣಯ್ಯ ಗುಡಿಸಲಿನಲ್ಲಿ ಬಂದು ಮಲಗಿದ್ದ. ಮಲಗುವ ವೇಳೆ ಬೀಡಿ ಸೇದಿದ ಆತ ಉಳಿದ ಬೀಡಿಯನ್ನ ಅಲ್ಲೆ ಎಸೆದಿದ್ದಾನೆ.
Advertisement
Advertisement
ಬೀಡಿಯಲ್ಲಿದ್ದ ಬೆಂಕಿಯ ಕಿಡಿ ಮಲಗಿದ್ದ ಹಾಸಿಗೆಗೆ ತಗುಲಿದ್ದು, ಕ್ಷಣಾರ್ಧದಲ್ಲೆ ಬೆಂಕಿ (Fire) ಹೊತ್ತು ಕೊಂಡು ಹಾಸಿಗೆ ಜೊತೆಗೆ ಗುಡಿಸಲು ಸುಟ್ಟುಕರಕಲಾಗಿದೆ. ಗುಡಿಸಲಿನಲ್ಲಿದ್ದ ಕೃಷ್ಣಯ್ಯ ಸುಟ್ಟುಗಾಯಕ್ಕೆ ಒಳಗಾಗಿದ್ದು, ಮದ್ದೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯ ಹಿನ್ನಲೆ ಆತನನ್ನ ಮೈಸೂರಿನ ಕೆ.ಆರ್ ಆಸ್ಪತ್ರೆ (KR Hospital) ಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೃಷ್ಣಪ್ಪ ಸಾವನ್ನಪ್ಪಿದ್ದಾನೆ.
Advertisement
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 6 ದಶಕಗಳಲ್ಲೇ ಮೊದಲ ಬಾರಿ ಚೀನಾ ಜನಸಂಖ್ಯೆ ಇಳಿಕೆ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k