ರಾಮನಗರ: ಮಂಡ್ಯ (Mandya) ಲೋಕಸಭೆ ಟಿಕೆಟ್ ಜೆಡಿಎಸ್‌ಗೆ (JDS) ಕನ್ಫರ್ಮ್. ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದು ಶಾಸಕ ಜಿ.ಟಿ.ದೇವೇಗೌಡ (G.T.Deve Gowda) ಹೇಳಿಕೆ ನೀಡಿದರು.
ಬಿಡದಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತೋಟದ ಮನೆಯಲ್ಲಿ ಭಾನುವಾರ ಮಂಡ್ಯ ಜೆಡಿಎಸ್ ನಾಯಕರ ಸಭೆ ನಡೆಸಲಾಯಿತು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ, ಮಂಡ್ಯ ಸ್ಥಳೀಯ ನಾಯಕರ ಸಭೆ ಮಾಡಿ ಚುನಾವಣೆಗೆ ಸಿದ್ಧತೆ ಮಾಡ್ತಿದ್ದೇವೆ. ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೋದಿ ಅವ್ರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ: ಸುಮಲತಾ
Advertisement
Advertisement
ಟಿಕೆಟ್‌ಗಾಗಿ ಸುಮಲತಾ ಸಭೆ ವಿಚಾರವಾಗಿ ಮಾತನಾಡಿ, ಸುಮಲತಾ ಅವರು ಬಿಜೆಪಿ ಅಧಿಕೃತ ಮೆಂಬರ್ ಅಲ್ಲ. ಆದರೂ ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಮಂಡ್ಯ ಕೇಳಿದರೆ ಬೆಂಗಳೂರು ಉತ್ತರ ಕೊಡಬಹುದು ಎಂಬ ಲೆಕ್ಕಾಚಾರ ಇರಬಹುದು. ನನಗೂ ಕೆಲವರು ಈ ಬಗ್ಗೆ ಹೇಳ್ತಿದ್ದಾರೆ. ಅಭ್ಯರ್ಥಿ ಯಾರೆಂದು ಇನ್ನೂ ನಿರ್ಧಾರ ಆಗಿಲ್ಲ ಎಂದು ಹೇಳಿದರು.
Advertisement
Advertisement
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಮಂಡ್ಯ ಟಿಕೆಟ್ ಬಗ್ಗೆ ಸಭೆ ಮಾಡಲಾಗ್ತಿದೆ. ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಆಗಲಿದೆ. ಸುಮಲತಾ ಅವರು ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ. ಅಂತಿಮವಾಗಿ ಮೈತ್ರಿ ನಾಯಕರು ಈ ಬಗ್ಗೆ ನಿರ್ಧಾರ ಮಾಡ್ತಾರೆ ಎಂದು ಮಾತನಾಡಿದರು. ಇದನ್ನೂ ಓದಿ: ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ