– ಲೋಕಸಭಾ ಚುನಾವಣಾ ಸಮಯದಲ್ಲಿ ಶಾಸಕರ ಮನೆಯಲ್ಲೇ ಹಲ್ಲೆ
– ಗನ್‌ಮ್ಯಾನ್ ಜೊತೆ ರಾಜಿ ಸಂಧಾನ ನಡೆಸಿದ್ದ ಉದಯ್
ಮಂಡ್ಯ: ದರ್ಶನ್ ಗ್ಯಾಂಗ್ (Darshan Gang) ಪೊಲೀಸ್ ಪೇದೆ (Police Constable) ಮೇಲೆಯೇ ಹಲ್ಲೆ ನಡೆಸಿದ್ದ ವಿಚಾರ ಈಗ ತಡವಾಗಿ ಬೆಳಕಿಗೆ ಬಂದಿದೆ.
ಹೌದು. ಲೋಕಸಭಾ ಚುನಾವಣೆ (Lok Sabha Election) ಸಮಯದಲ್ಲಿ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು (Star Chandru) ಪರ ಪ್ರಚಾರಕ್ಕೆ ಮಂಡ್ಯಕ್ಕೆ (Mandya) ಆಗಮಿಸಿದ್ದರು. ಏಪ್ರಿಲ್ 22 ರಂದು ಮದ್ದೂರು (Madduru) ಕ್ಷೇತ್ರದಲ್ಲಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ ನಡೆಸುತ್ತಿದ್ದಾಗ ಮದ್ದೂರು ಶಾಸಕ ಉದಯ್ (MLA Uday) ಅವರ ಗನ್ ಮ್ಯಾನ್ ಆಗಿದ್ದ ನಾಗೇಶ್ (Nagesh) ಜೊತೆ ದರ್ಶನ್ ಪಟಾಲಂ ಗಲಾಟೆ ನಡೆಸಿತ್ತು.
Advertisement
Advertisement
ಮುಖಂಡರನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಲಕ್ಷ್ಮಣ್, ನಾಗರಾಜು ಹಾಗೂ ಇತರರು ಡಿಎಆರ್ ಪೇದೆ ನಾಗೇಶ್ ಜೊತೆ ಜಗಳ ಮಾಡಿದ್ದರು. ಇದೇ ಜಗಳ ಮುಂದುವರಿಸಿ ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್ ಅವರ ಮೇಲೆ ಹಲ್ಲೆ ಮಾಡಿತ್ತು. ಇದನ್ನೂ ಓದಿ: ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿಲ್ಲವೇ? – ವಕೀಲರು ಕೊಟ್ಟ ಉತ್ತರವೇನು?
Advertisement
ಪೊಲೀಸರು ನಮ್ಮನ್ನ ಏನು ಮಾಡಲು ಆಗಲ್ಲ. ನಮ್ಮ ಹತ್ತಿರ ಏನು ಕಿತ್ತುಕೊಳ್ಳಲು ಆಗಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದವರ ವಿರುದ್ಧ ಕೆಸ್ತೂರು ಪೊಲೀಸ್ ಠಾಣೆಗೆ ನಾಗೇಶ್ ಅವರು ದೂರು ನೀಡಲು ಹೋಗಿದ್ದರು. ಅಷ್ಟೇ ಅಲ್ಲದೇ ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ನಾಗೇಶ್ ಅವರಿಗೆ ಚಿಕಿತ್ಸೆ ಸಹ ನಡೆದಿತ್ತು.
Advertisement
ಈ ವಿಚಾರ ದೊಡ್ಡದಾಗುತ್ತಿದ್ದಂತೆ ಶಾಸಕ ಉದಯ್ ಅವರು ರಾಜಿ ಸಂಧಾನ ಮಾಡಿ ನಾಗೇಶ್ ಅವರನ್ನು ಮನವೊಲಿಸಿದ್ದರು. ನಂತರ ಉದಯ್ ಗನ್ ಮ್ಯಾನ್ ಹುದ್ದೆಯಿಂದ ಹೊರಬಂದಿದ್ದ ನಾಗೇಶ್ ಅವರು ಈಗ ಡಿಎಆರ್ ತುಕಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.