ಮಂಡ್ಯ: ಕಳೆದ ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಒಂದಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನ ಡಿಸ್ನಿಲ್ಯಾಂಡ್ ಯೋಜನೆ ಇನ್ನೂ ಕೂಡ ಜೀವಂತವಾಗಿ ಇದೆ. ಈ ನಿಟ್ಟಿನಲ್ಲಿ ಇಂದು ಮಂಡ್ಯದಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ ಸರ್ಕಾರ ಬದಲಾದರೂ ಸಹ ಕೆಲವು ಒಳ್ಳೆಯ ಯೋಜನೆಗಳನ್ನು ಕೈ ಬಿಡುವುದಿಲ್ಲ. ಅಂತೆಯೇ ಕೆಆರ್‍ಎಸ್‍ನ ಡಿಸ್ನಿಲ್ಯಾಂಡ್ ಯೋಜನೆಯನ್ನು ಸಹ ನಾವು ಇನ್ನೂ ಕೈ ಬಿಟ್ಟಿಲ್ಲ ಎಂದು ಹೇಳಿದ್ದಾರೆ.
ಕಳೆದ ಸಮ್ಮಿಶ್ರ ಸರ್ಕಾರ ಪ್ರವಾಸೋದ್ಯಮ ಸಚಿವರಾಗಿದ ಸಾ.ರಾ.ಮಹೇಶ್ ಕೆಆರ್‍ಎಸ್‍ನಲ್ಲಿ ಡಿಸ್ನಿಲ್ಯಾಂಡ್‍ನ್ನು ರೂಪಿಸುವುದಾಗಿ ಯೋಜನೆಯೊಂದನ್ನು ತಯಾರು ಮಾಡಲು ಮುಂದಾಗಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಉರುಳಿದ ನಂತರ ಈ ಯೋಜನೆಯೂ ಸಹ ಮುಗಿದು ಹೋಯಿತು ಎನ್ನಲಾಗುತ್ತಿತ್ತು. ಆದರೆ ಇಂದು ಸಚಿವ ಸಿ.ಟಿ.ರವಿ ಈ ಯೋಜನೆ ಇನ್ನೂ ಜೀವಂತವಾಗಿ ಇದೆ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಸರ್ಕಾರ ಬದಲಾಯ್ತು ಅಂದ್ರೆ ಅವರ ಅಲೋಚನೆಗಳನ್ನು ಅಲ್ಲಿಗೆ ಬಿಟ್ಟು ಹೋಗುವಂತಹ ಪದ್ಧತಿ ಇಲ್ಲ. ಅವರ ಒಳ್ಳೆಯ ಅಲೋಚನೆಗಳನ್ನು ಖಂಡಿತವಾಗಿಯೂ ಬಳಸಿಕೊಳ್ಳುತ್ತೇವೆ ಎಂದರು.
Advertisement
Advertisement
ಈ ಡಿಸ್ನಿಲ್ಯಾಂಡ್ ಯೋಜನೆ ಪ್ರವಾಸೋದ್ಯಮ ಇಲಾಖೆಯಿಂದ ಪ್ಲಾನ್ ಮಾಡಿರಲಿಲ್ಲ. ಇದನ್ನು ನೀರಾವರಿ ಇಲಾಖೆಯಿಂದ ಮಾಡಿಸುತ್ತೇವೆ ಎಂದು ಸಾ.ರಾ.ಮಹೇಶ್ ಅವರು ಹೇಳಿದ್ದರು. ಸದ್ಯ ಪ್ರವಾಸೋದ್ಯಮ ಇಲಾಖೆಯಲ್ಲಿ ಡಿಸ್ನಿಲ್ಯಾಂಡ್ ಯೋಜನೆಗೆ ಬೇಕಾದ 2 ಸಾವಿರ ಕೋಟಿ ಹಣ ಇಲ್ಲ. ಈ ಬಗ್ಗೆ ಹಣ ಹೂಡಿಕೆ ಮಾಡಿದ್ದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಸಿಟಿ ರವಿ ಹೇಳಿದ್ದಾರೆ.