ಮಂಡ್ಯ: ಉಪ ಚುನಾವಣೆಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಕೆ.ಆರ್ ಪೇಟೆಯೂ ಒಂದು. ಈಗ ಇಲ್ಲಿ ಎಲ್ಲರೂ ಡಿಫರೆಂಟ್ ಸ್ಟ್ರಾಟಜಿಯಲ್ಲಿ ತೊಡಗಿದ್ದಾರೆ.
ಮಂಡ್ಯ ರಣಕಣದಲ್ಲಿ ತೆನೆ ಕಾಳು ಕಟ್ಟಿದ್ದೇ ಹೆಚ್ಚು. ಈಗ ಕೆ.ಆರ್.ಪೇಟೆ ಬೈಎಲೆಕ್ಷನ್ ಬಂದಿದ್ದು ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಡಿಫರೆಂಟ್ ಪ್ಲಾನ್ ಮಾಡುತ್ತಿದ್ದಾರೆ. ಜೆಡಿಎಸ್ ತನ್ನ ಭದ್ರ ಕೋಟೆಯನ್ನು ಉಳಿಸಿಕೊಳ್ಳಬೇಕು ಎಂದು ಸರ್ಕಸ್ ಮಾಡುತ್ತಿದೆ. ಇನ್ನೊಂದು ಕಡೆ ಕಾಂಗ್ರೆಸ್ ಗೆಲ್ಲುವ ಮೂಲಕ ಮತ್ತೆ ಕೆಆರ್‍ಪೇಟೆಯನ್ನು ತಮ್ಮ ವಶಪಡಿಕೊಳ್ಳಬೇಕೆಂಬ ಹಂಬಲವಿದೆ. ಮತ್ತೊಂದು ಕಡೆ ಬಿಜೆಪಿ ಕೆಆರ್‍ಪೇಟೆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಂಡ್ಯದಲ್ಲಿ ಬಿಜೆಪಿ ಬಾವುಟವನ್ನು ಹಾರಿಸಬೇಕೆಂಬ ಕನಸು ಕಾಣುತ್ತಿದೆ. ಈ ಎಲ್ಲಾ ಸರ್ಕಸ್, ಹಂಬಲ ಮತ್ತು ಕನಸುಗಳನ್ನು ನನಸು ಮಾಡಿಕೊಳ್ಳಲು ಮೂರು ಪಕ್ಷಗಳು ರೂಪಿಸ್ತಿರೋದು ಒಂದೇ ಸ್ಟ್ರಾಟಜಿ. ಅದುವೇ ಜಾತಿ ಮತಗಳನ್ನು ಸೆಳೆಯುವುದು.
ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ಹೆಚ್ಚಿವೆ. ಈ ಕ್ಷೇತ್ರದಲ್ಲಿ 90 ಸಾವಿರ ಮತಗಳು ಇವೆ ಎಂದು ಅಂದಾಜಿಸಲಾಗಿದೆ. ಈ ಮತಗಳನ್ನು ಕಬಳಿಸಲು ಜೆಡಿಎಸ್, ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಂದ ಮತಬೇಟೆಗೆ ಶುರುಮಾಡಿದೆ. ಉಳಿದಂತೆ ಬಿಜೆಪಿ ತನ್ನ ಸಚಿವ ಸಂಪುಟದಲ್ಲಿ ಅಶ್ವಥ್ ನಾರಾಯಣ್ ಹಾಗೂ ಆರ್.ಅಶೋಕ್‍ಗೆ ಪ್ರಮುಖ ಹುದ್ದೆ ನೀಡಿದೆ. ಜೊತೆ ಕೆ.ಆರ್ ಪೇಟೆ ಚುನಾವಣೆಯ ಉಸ್ತುವಾರಿಯಾಗಿ ಮಾಧುಸ್ವಾಮಿಗೆ ಕೊಕ್ ಕೊಟ್ಟು ಅಶ್ವಥ್ ನಾರಾಯಣ್ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಬಿಜೆಪಿ ಒಕ್ಕಲಿಗರ ಮತಗಳನ್ನು ಕಬಳಿಸುವ ತಂತ್ರವನ್ನು ಬಿಜೆಪಿ ಮಾಡಿದೆ.
ಇಷ್ಟು ಮಾತ್ರವಲ್ಲದೇ ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿ ಲಿಂಗಾಯತರ ವೋಟ್‍ಗೂ ಕಣ್ಣಾಕಿದೆ. ಸ್ವತಃ ಕೆ.ಆರ್.ಪೇಟೆ ಚುನಾವಣಾ ಉಸ್ತುವಾರಿಯಾಗಿರೋ ವಿಜಯೇಂದ್ರರೇ ರಣಕಣಕ್ಕಿಳಿದು ಅಬ್ಬರ ಪ್ರಚಾರ ಮಾಡುತ್ತಿದ್ದಾರೆ. ಒಟ್ಟಾರೆ ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸಲಿದ್ದು, ಹೀಗಾಗಿ ಮೂರು ಪಕ್ಷಗಳು ಒಕ್ಕಲಿಗರನ್ನು ಸೆಳೆಯಲು ತಮ್ಮದೇ ಸ್ಟ್ರಾಟರ್ಜಿ ಮಾಡ್ತಾ ಇದ್ದಾರೆ.