-ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು ಎಂದ ಗ್ರಾಮಸ್ಥರು
ಮಂಡ್ಯ: ಕೆರಗೋಡಿನ (Keragodu) ಅರ್ಜುನ ಸ್ತಂಭದ ಮೇಲೆ ಹೊಸ ರಾಷ್ಟ್ರ ಧ್ವಜವನ್ನು ಹಾರಿಸಿದರೂ ಸಹ ಗ್ರಾಮಸ್ಥರು ಮತ್ತೆ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 108 ಅಡಿಯ ಅರ್ಜುನ ಸ್ತಂಭಕ್ಕೆ ಮತ್ತೆ ಹಳೆಯ ಧ್ವಜದ ಅಳತೆಯ ಧ್ವಜವನ್ನೇ ಹಾರಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
Advertisement
ಜ.26ರ ಗಣರಾಜ್ಯೋತ್ಸವದಂದು ಕೆರಗೋಡಿನ ಅರ್ಜುನ ಸ್ತಂಭದಲ್ಲಿ ಇದ್ದ ಹನುಮ ಧ್ವಜವನ್ನು ಇಳಿಸಿ 20 ಅಡಿ ಅಗಲ, 30 ಅಡಿ ಉದ್ದದ ಬೃಹತ್ ರಾಷ್ಟ್ರ ಧ್ವಜವನ್ನು ಗ್ರಾಮಸ್ಥರು ಹಾರಿಸಿದ್ದರು. ಈ ವೇಳೆ ಸ್ವಚ್ಛಂದವಾಗಿ ತ್ರಿವರ್ಣ ಧ್ವಜ ಹಾರಾಡುತ್ತಿತ್ತು. ಇದಾದ ಬಳಿಕ ಜ.27ರಂದು ಮತ್ತೆ ಗ್ರಾಮಸ್ಥರ ಹನುಮ ಧ್ವಜವನ್ನು ಹಾರಿಸಿದ್ದರು. ನಂತರ ಜ.28 ರಂದು ಜಿಲ್ಲಾಡಳಿತ ಹನುಮ ಧ್ವಜ ಇಳಿಸಿ ಸಣ್ಣದಾದ ಧ್ವಜವನ್ನು ಹಾರಿಸಿತ್ತು. ಈ ಧ್ವಜ ಹಾರುತ್ತಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಇದೀಗ ಅದೇ ಅಳತೆಯ ಧ್ವಜ ಹಾರಿಸಿದ್ದಾರೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೆರಗೋಡು ವಿವಾದಿತ ಅರ್ಜುನ ಸ್ತಂಭದಲ್ಲಿ ನೂತನ ಧ್ವಜಾರೋಹಣ
Advertisement
Advertisement
ಇಷ್ಟು ದೊಡ್ಡ ಧ್ವಜ ಸ್ತಂಭದಲ್ಲಿ ಚಿಕ್ಕ ರಾಷ್ಟ್ರಧ್ವಜವನ್ನು ಜಿಲ್ಲಾಡಳಿತ ಹಾರಿಸಿದೆ. ಈ ಬಗ್ಗೆ ಅಧಿಕಾರಿಗಳಿಗೂ ದೊಡ್ಡ ರಾಷ್ಟ್ರ ಧ್ವಜಕ್ಕೆ ಮನವಿ ಮಾಡಿದ್ದೇವೆ. ಅತುರಾತುರದಲ್ಲಿ ಹೊಸ ಧ್ವಜ ಹಾರಿಸಿದ್ದಾರೆ. ಇನ್ನೂ ನಮ್ಮ ಧ್ವಜ ಹೋರಾಟ ಇಲ್ಲಿಗೆ ನಿಲ್ಲಲ್ಲ. ಜೂ.4ರ ನಂತರ ಹೋರಾಟ ತೀವ್ರವಾಗಲಿದೆ. ಹೋರಾಟದ ಪರಿಣಾಮ ಸರ್ಕಾರ ಎದುರಿಸಲಿದೆ. ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕು. ರಾಷ್ಟ್ರೀಯ ಹಬ್ಬದ ಸಂಧರ್ಭದಲ್ಲಿ ರಾಷ್ಟ್ರ ಧ್ವಜ ಹಾರಾಡಲು ಅಭ್ಯಂತರವಿಲ್ಲ. ಅರ್ಜುನ ಸ್ತಂಭ ನಿರ್ಮಾಣದ ಉದ್ದೇಶ ಹನುಮ ಧ್ವಜ ಹಾರಿಸುವುದು. ಹಾಗಾಗಿ ಮತ್ತೆ ಅರ್ಜುನ ಸ್ತಂಭದಲ್ಲಿ ಹನುಮ ಧ್ವಜ ಹಾರಾಡಬೇಕೆಂದು ಕೆರಗೋಡು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೂರ್ವ ಮುಂಗಾರಿನ ಅಬ್ಬರ – 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್