ಮಂಡ್ಯ: ನಮಗೆ ಕೊರೊನಾ ಬಂದಿದೆ. ನಮ್ಮನ್ನು ಮುಟ್ಟಿದ್ರೆ ನೀವು ಸಾಯ್ತೀರಿ ಎಂದು ಚೆಕ್‍ಪೋಸ್ಟ್ ಸಿಬ್ಬಂದಿಯನ್ನು ಬೆದರಿಸಿ ಕೆಲ ಕಿಡಿಗೇಡಿಗಳು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣವನ್ನು ಪ್ರವೇಶಿಸಿದ್ದಾರೆ.
Advertisement
ಈ ಕುರಿತು ಮಾತನಾಡಿರುವ ಪೊಲೀಸ್ ಅಧಿಕಾರಿ, ಪ್ಯಾಸೆಂಜರ್ ಆಟೋದಲ್ಲಿ ಬಂದ ಮೂವರು ಮುಸ್ಲಿಂ ಯುವಕರು ಕೆ.ಆರ್.ಪೇಟೆ ಪ್ರವೇಶಕ್ಕೆ ಮುಂದಾಗಿದ್ದರು. ಚೆಕ್‍ಪೋಸ್ಟ್ ನಲ್ಲಿ ಸಿಬ್ಬಂದಿ ಪ್ರಶ್ನಿಸಲು ಮುಂದಾಗುತ್ತಿದ್ದಂತೆ, ನಾವು ಹೋಮ್ ಕ್ವಾರಂಟೈನ್ ನಲ್ಲಿದ್ದೇವೆ. ನಮಗೆ ಸೀಲ್ ಸಹ ಹಾಕಿದ್ದಾರೆ. ನಮ್ಮನ್ನು ಮುಟ್ಟಬೇಡಿ ಎಂದು ಬೆದರಿಕೆ ಹಾಕಿ ಕೆ.ಆರ್.ಪೇಟೆ ಪ್ರವೇಶಿಸಿದ್ದಾರೆ ಎಂದಿದ್ದಾರೆ.
Advertisement
Advertisement
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರನ್ನು ಹಿಂಬಾಲಿಸಿದ್ದಾರೆ. ರಾತ್ರಿಯಾಗಿದ್ದರಿಂದ ಯುವಕರು ಎಲ್ಲಿ ಹೋದ್ರು ಎಂಬುವುದು ಕಂಡು ಬಂದಿಲ್ಲ. ಕೆ.ಆರ್.ಪೇಟೆಯ ಎಲ್ಲ ಮಾರ್ಗಗಳನ್ನು ಬಂದ್ ಮಾಡಿದ್ದು, ಯುವಕರ ನಮ್ಮ ಬಲಗೆ ಬೀಳಲಿದ್ದಾರೆ. ಕೆ.ಆರ್.ಪೇಟೆಯ ಜನತೆ ಯಾರು ಆತಂಕಕ್ಕೆ ಒಳಗಾಗೋದು ಬೇಡ ಎಂದು ಹೇಳಿದ್ದಾರೆ.