– ಮದ್ವೆ ಆಗದೇ ಇರಲು ಕೃತ್ಯ ಎಸಗಿ ಸಿಕ್ಕಿಬಿದ್ರು
– ತನ್ನ ಭವಿಷ್ಯವನ್ನೇ ಹಾಳು ಮಾಡಿಕೊಂಡ ವಿದ್ಯಾರ್ಥಿ
ಮಂಡ್ಯ: ಆ ವಿದ್ಯಾರ್ಥಿ ತನ್ನ ಪಾಡಿಗೆ ಕಾಲೇಜಿಗೆ ಹೋಗಿ ಮನೆ ಬರುತ್ತಿದ್ದ. ಅಪ್ಪ-ಅಮ್ಮನ ಪಾಲಿಗೆ ಒಳ್ಳೆಯ ಮಗ ಹಾಗೂ ಕಾಲೇಜಿಗೆ ಒಳ್ಳೆಯ ವಿದ್ಯಾರ್ಥಿಯೂ ಸಹ ಆಗಿದ್ದ. ಆದರೆ ಒಬ್ಬ ವಿಕೃತ ಮನಸ್ಸಿನ ಯುವಕನ ಜೊತೆ ಸೇರಿ ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಹೆತ್ತ ತಂದೆ ತಾಯಿಗಳಿಗೂ ಸಹ ನೋವನ್ನು ನೀಡುತ್ತಿದ್ದಾನೆ.
ಸಾಮಾನ್ಯವಾಗಿ ಕಾಲೇಜಿನ ದಿನಗಳಲ್ಲಿ ಹುಡುಗ-ಹುಡುಗಿಗೆ ಲವ್ ಆಗೋದು ಕಾಮನ್. ಅಷ್ಟೇ ಏಕೆ ನಂಗೆ ಆ ಹುಡುಗಿ ಬೇಕೇ ಬೇಕು ಎಂದು ಹುಡುಗಿಯನ್ನು ಹುಡುಗರು ಅಪಹರಣ ಮಾಡುವಂತಹ ಕಾಲವು ಸಹ ಬಂದಿದೆ. ಆದರೆ ಇಲ್ಲಿ ಹುಡುಗರಿಬ್ಬರ ವಿಕೃತ ಸ್ಥಿತಿಯಿಂದಾಗಿ ವಿದ್ಯಾರ್ಥಿಯ ಭವಿಷ್ಯ ಹಾಳಾಗುವುದರ ಜೊತೆಗೆ ಪೋಷಕರು ಸಹ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಕಳೆದ ಫೆಬ್ರವರಿ 14ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಬಳಿ ಯಾರೋ ದುಷ್ಕರ್ಮಿಗಳು ಕಾಲೇಜು ವಿದ್ಯಾರ್ಥಿಯ ಮರ್ಮಾಂಗ ಕತ್ತರಿಸಿ ವಿದ್ಯಾರ್ಥಿಯನ್ನು ರಸ್ತೆಯಲ್ಲಿ ಬಿಸಾಡಿ ಹೋಗಿದ್ದರು. ವಿದ್ಯಾರ್ಥಿ ನೋವು ತಡೆಯಲಾರದೇ ತನ್ನ ತಂದೆಗೆ ಕಾಲ್ ಮಾಡಿದ್ದಾನೆ. ನಂತರ ವಿದ್ಯಾರ್ಥಿಯನ್ನು ಶ್ರೀರಂಗಪಟ್ಟಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಈ ಪ್ರಕರಣವನ್ನು ಶ್ರೀರಂಗಪಟ್ಟಣ ಪೊಲೀಸರು ದಾಖಲಿಸಿಕೊಂಡರು. ಈ ವೇಳೆ ಇಡೀ ಪ್ರಕರಣದ ಸುತ್ತ ನಾನಾ ಅನುಮಾನಗಳು ಸಹ ಮೂಡಿದ್ದವು. ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.
Advertisement
Advertisement
ವಿದ್ಯಾರ್ಥಿ ಹೇಳಿದ್ದೇನು?
ಈ ವೇಳೆ ಪೊಲೀಸರು ವಿದ್ಯಾರ್ಥಿಯ ಹೇಳಿಕೆ ಪಡೆಯುವಾಗ, ವಿದ್ಯಾರ್ಥಿ ಯಾರೋ ಕಾರಿನಲ್ಲಿ ಬಂದು ಲಿಫ್ಟ್ ಕೊಡ್ತೀನಿ ಬಾ ಅಂತಾ ಎಂದರು. ಕಾರು ಹತ್ತಿದಾಗ ಅವರು ಹಣ ಕೇಳಿದರು, ನಾನು ಇಲ್ಲ ಅಂದಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆಯನ್ನು ಆಧಾರವನ್ನಾಗಿ ಇಟ್ಟುಕೊಂಡು ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದರು. ಪೊಲೀಸರು ಈ ಪ್ರಕರಣದ ಕುರಿತು ತನಿಖೆ ನಡೆಸುವಾಗ ಯಾವುದೇ ಸುಳಿವು ಸಹ ಸಿಕ್ಕಿರಲಿಲ್ಲ.
ರಹಸ್ಯ ಬಯಲು ಮಾಡಿತ್ತು ಸಿಸಿ ಕ್ಯಾಮೆರಾ
ಈ ನಡುವೇ ವಿದ್ಯಾರ್ಥಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಪ್ರಕರಣದಲ್ಲಿ ಯಾವುದೇ ತಿರುವು ಸಿಗದೇ ತಲೆ ಮೇಲೆ ಕೈ ಹೊತ್ತು ಕೂತಿದ್ದ ಪೊಲೀಸರು ಒಂದು ಪ್ಲಾನ್ ಮಾಡಿದ್ದರು. ವಿದ್ಯಾರ್ಥಿ ಇದ್ದ ವಾರ್ಡ್‍ಗೆ ರಹಸ್ಯವಾಗಿ ಪೊಲೀಸರು ಸಿಟಿ ಟಿವಿಯನ್ನು ಅಳವಡಿಸಿದ್ದರು. ಅಲ್ಲದೇ ಓರ್ವ ಪೇದೆಯನ್ನು ನರ್ಸ್ ವೇಶದಲ್ಲಿ ಅಲ್ಲಿಯೇ ಇರಿಸಿದ್ದರು. ಈ ಬಳಿಕ ವಿದ್ಯಾರ್ಥಿಯನ್ನು ನೋಡಲು ಓರ್ವ ಯುವಕ ಪದೇ ಪದೇ ಆಸ್ಪತ್ರೆಗೆ ಬರುತ್ತಿದ್ದ. ಅಲ್ಲದೇ ಆ ವಿದ್ಯಾರ್ಥಿಯನ್ನು ತಬ್ಬಿಕೊಂಡು ಮುತ್ತನ್ನು ಸಹ ಕೊಡುತ್ತಿದ್ದ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಆಗಿರುವುದರ ಜೊತೆಗೆ ಮಾರುವೇಶದಲ್ಲಿ ಇದ್ದ ಪೊಲೀಸ್ ಪೇದೆಯೂ ಸಹ ನೋಡಿದ್ದರು. ಇದನ್ನು ಗಮನಿಸಿದ ಪೊಲೀಸರಿಗೆ ಅನುಮಾನ ಹುಟ್ಟಿತ್ತು.
ವಿಚಾರಣೆ ವೇಳೆ ಪ್ರಕರಣಕ್ಕೆ ಟ್ವಿಸ್ಟ್
ಆಸ್ಪತ್ರೆಗೆ ಬಂದು ವಿದ್ಯಾರ್ಥಿಗೆ ಕಿಸ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ವಿಚಾರಣೆ ಮಾಡಿದ್ದರು. ಈ ವೇಳೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಕುಮಾರ ಅಲಿಯಾಸ್ ಸುನಿ ಎಂದು ತಿಳಿಯುತ್ತದೆ. ನಂತರ ಪ್ರಕರಣ ಸಂಬಂಧ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಹೊರಗೆ ಬಂದಿದೆ. ವಿದ್ಯಾರ್ಥಿಯ ಮರ್ಮಾಂಗ ಕಟ್ ಮಾಡಲು ಮೂಲ ಕಾರಣ ಸಲಿಂಗಕಾಮ ಎಂದು ಈ ವೇಳೆ ಬೆಳಕಿಗೆ ಬಂದಿದೆ. ಅಲ್ಲದೇ ವಿದ್ಯಾರ್ಥಿಯ ಮರ್ಮಾಂಗವನ್ನು ಯಾರು ಕಟ್ ಮಾಡಿಲ್ಲ. ವಿದ್ಯಾರ್ಥಿಯೇ ಕತ್ತರಿಸಿಕೊಂಡಿದ್ದಾನೆ ಎನ್ನುವ ಅಂಶವೂ ಸಹ ಪೊಲೀಸರಿಗೆ ತಿಳಿದೆ.
ಸಲಿಂಗಕಾಮದ ಪ್ರೇರಣೆ
ಸುನಿ ಹಾಗೂ ಈ ವಿದ್ಯಾರ್ಥಿ ಕಳೆದ ಐದು ವರ್ಷಗಳಿಂದ ಪರಿಚಯವಾಗಿರುತ್ತಾರೆ. ಸುನಿ ಜಮೀನಿನಲ್ಲೇ ಒಂದು ದೇವಸ್ಥಾನ ಇದ್ದ ಕಾರಣ ವಿದ್ಯಾರ್ಥಿಯನ್ನು ಪ್ರತಿ ಶುಕ್ರವಾರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ನನ್ನ ಮೇಲೆ ದೇವರು ಬರುತ್ತದೆ ಎಂದು ಹೇಳಿದ್ದ. ಅಲ್ಲದೇ ಸುನಿ ಹಾಗೂ ವಿದ್ಯಾರ್ಥಿ ಊರಿನಲ್ಲಿ ಒಟ್ಟಿಗೆ ಓಡಾಡುತ್ತಿದ್ದರು. ನಂತರ ಸುನಿ ತನ್ನಲ್ಲಿ ಇದ್ದ ಸಲಿಂಗಕಾಮದ ಬಗ್ಗೆ ವಿದ್ಯಾರ್ಥಿಯೊಂದಿಗೆ ಹಂಚಿಕೊಂಡಿದ್ದಾನೆ. ಈ ಬಳಿಕ ಇಬ್ಬರು ಒಟ್ಟಾಗಿಯೇ ಇರುತ್ತಾರೆ.
ಕತ್ತರಿಸಿದ್ದು ಯಾಕೆ?
ಸುನಿ ನಾನು ಮದುವೆಯಾಗಲ್ಲ ನಾವಿಬ್ಬರೂ ಒಟ್ಟಿಗೆ ಇರೋಣಾ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಅಲ್ಲದೇ ನಿನ್ನ ಮರ್ಮಾಂಗವನ್ನು ಕತ್ತರಿಸಿಕೋ ಆಗ ನಿನಗೆ ಮದುವೆ ಮಾಡಲ್ಲ ಆಗ ನಾವಿಬ್ಬರೂ ಒಟ್ಟಿಗೆ ಆರಾಮವಾಗಿ ಇರಬಹುದು ಎಂದು ಪ್ರೇರಣೆ ನೀಡಿದ್ದಾನೆ. ನಂತರ ಫೆಬ್ರವರಿ 14 ರಂದು ವಿದ್ಯಾರ್ಥಿ ಸೀತಾಪುರ ಗೇಟ್‍ನ ನಿರ್ಜನ ಪ್ರದೇಶದಲ್ಲಿ ತನ್ನ ಮರ್ಮಾಂಗವನ್ನು ವಿದ್ಯಾರ್ಥಿ ಕತ್ತರಿಸಿಕೊಂಡಿದ್ದಾನೆ. ನೋವು ತಾಳಲಾರದೆ ತನ್ನ ತಂದೆಗೆ ಕಾಲ್ ಮಾಡಿದ್ದಾನೆ. ಎಲ್ಲಿ ನಿಜ ಹೇಳಿದರೆ ಬೈಯ್ಯುತ್ತಾರೆ ಎಂಬಾ ಕಾರಣಕ್ಕೆ ವಿದ್ಯಾರ್ಥಿ ಯಾರೋ ಅಪರಿಚಿತರು ಹೀಗೆ ಮಾಡಿ ಬಿಟ್ಟರು ಎಂದು ಕಥೆ ಕಟ್ಟಿದ್ದಾನೆ.
ಒಟ್ಟಾರೆ ತನ್ನ ಸಲಿಂಗಕಾಮದ ಆಸೆಯಿಂದ ವಿದ್ಯಾರ್ಥಿ ಜೀವನದಲ್ಲಿ ಆಟವಾಡಿರುವ ಸುನಿ ಪೊಲೀಸರ ಅತಿಥಿಯಾದರೆ, ಸುನಿಗೆ ಸಹಕರಿಸಿ ವಿದ್ಯಾರ್ಥಿ ನೋವಿನಲ್ಲಿ ಒದ್ದಾಡುತ್ತಿದ್ದಾನೆ. ಇನ್ನೊಂದೆಡೆ ವಿದ್ಯಾರ್ಥಿಯ ಪೋಷಕರು ತಮ್ಮ ಮಗನ ಸ್ಥಿತಿ ಹೀಗೆ ಆಯ್ತಲ್ಲ ಎಂದು ಕೊರಗುತ್ತಿದ್ದಾರೆ.