-ಮಂಡ್ಯ ಮೆನು ಹೀಗಿದೆ?
ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ರಣಕಹಳೆಯ ಸದ್ದು ಮುಗಿಲು ಬಿಟ್ಟಿದೆ. ಅದರಲ್ಲೂ ಮಂಡ್ಯದ ಅಖಾಡವಂತೂ ಸಖತ್ ರಂಗೇರಿದೆ. ಈಗ ರಾಜ್ಯದ ಅಂಗಳದಲ್ಲಿ ಚುನಾವಣಾ ಬೆಟ್ಟಿಂಗ್ ಅಬ್ಬರ, ಇನ್ನೊಂದಡೆ ಯುಗಾದಿಗೆ ಬಾಡೂಟ, ಸಿಹಿ ಊಟದ ಮೆನು ಕೂಡ ರೆಡಿಯಾಗಿದೆ ಮಾತುಗಳು ಸಕ್ಕರೆ ನಾಡಿನಲ್ಲಿ ಕೇಳಿ ಬರುತ್ತಿವೆ.
ಮಂಡ್ಯದಲ್ಲಿ ಸುಮಲತಾ ಗೆಲ್ತಾರೆ ಎಂದು ಕೆಲವರು ಹೇಳಿದರೆ, ಹಲವರು ನಿಖಿಲ್ ಮಂಡ್ಯ ಚಕ್ರವ್ಯೂಹ ಭೇದಿಸುತ್ತಾರೆ ಎಂದು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಸಾವಿರ ರೂಪಾಯಿಯಿಂದ ಕೋಟಿ ಲೆಕ್ಕದಲ್ಲಿ ಬೆಟ್ಟಿಂಗ್ ಹವಾ ಜೋರಾಗಿದೆ. ದುಡ್ಡಿನ ಬೆಟ್ಟಿಂಗ್ ಅಷ್ಟೇ ಅಲ್ವಂತೆ, ಜಮೀನು ಅಡವಿಟ್ಟು ಕೂಡ ಬೆಟ್ಟಿಂಗ್ ಮೇನಿಯಾ ಶುರುವಾಗಿದ್ಯಯಂತೆ. ಇನ್ನು ಕಲಬುರ್ಗಿ ಮೈಸೂರು-ಕೊಡಗು ಕ್ಷೇತ್ರದ ಬಗ್ಗೆಯೂ ಬೆಟ್ಟಿಂಗ್ ಶುರುವಾಗಿದೆ ಎಂದು ಮತದಾರರು ಹೇಳುತ್ತಿದ್ದಾರೆ.
Advertisement
Advertisement
Advertisement
ಮಂಡ್ಯದ ಮತದಾರಿಗೆ ಈಗ ಯುಗಾದಿ ಹಬ್ಬಕ್ಕೆ ಭರ್ಜರಿ ಬಾಡೂಟ, ಸಿಹಿ ಊಟದ ಮೆನು ಹಂಚಿಕೆಯಾಗುತ್ತಿದೆ. ಸೈಲೆಂಟ್ ಆಗಿ ಮತದಾರರ ಮನೆಯಂಗಳದಲ್ಲಿ ಮೆನುಗಳು ಬೀಳುತ್ತಿದೆಯಂತೆ ಎಂದು ಹೇಳಲಾಗುತ್ತಿದೆ. 2 ಕೆಜಿ ಮಟನ್, 2 ಕೆಜಿ ಚಿಕನ್, 10 ಕೆಜಿ ಅಕ್ಕಿ, 2 ಕೆಜಿ ಬೆಲ್ಲ, 1 ಕೆಜಿ ಸಕ್ಕರೆ, 2 ಕೆಜಿ ಬೇಳೆ, 2 ಕೆಜಿ ಚಿರೋಟಿ ರವೆ, 2 ಕೆಜಿ ಸನ್ ಪ್ಲವರ್ ಆಯಿಲ್ ಮತ್ತು 2 ಕೆಜಿ ಬಿರಿಯಾನಿ ರೈಸ್ ಮಂಡ್ಯ ಮತದಾರರ ಮನೆಯನ್ನ ಈ ಎಲ್ಲ ದಿನಸಿ ಪದಾರ್ಥಗಳು ಸೇರಲು ಸಿದ್ಧವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಇತ್ತ ಚುನಾವಣಾ ಆಯೋಗ ಮಂಡ್ಯದ ಮೇಲೆ ಸಹ ಹದ್ದಿನ ಕಣ್ಣಿಟ್ಟಿದೆ. ಬುಧವಾರ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದಾರೆ.