Connect with us

Districts

ಅನಾಥ ಮಕ್ಕಳಿಗೆ ಉಚಿತ ಹೇರ್ ಕಟಿಂಗ್, ಹಾಸಿಗೆ – ಮಾದರಿಯಾದ ದಚ್ಚು ಅಭಿಮಾನಿ

Published

on

– ಅಂಧ್ರದವರಾದರೂ ದರ್ಶನ್ ಎಂದರೆ ವಿಶೇಷ ಪ್ರೀತಿ

ಮಂಡ್ಯ: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ 43 ಜನ್ಮದಿನವನ್ನು ಆಚರಣೆ ಮಾಡಿಕೊಳ್ಳುತ್ತಿದ್ದು, ಅವರ ಅಭಿಮಾನಿ ಓಂಕಾರ್ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇತರೆ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.

ತಂದೆ, ತಾಯಿಯಿಂದ ದೂರಾಗಿ ನಗರದ ಹೊರವಲಯದ ವಿಕಸನ ಸಂಸ್ಥೆಯ ಆಶ್ರಯದಲ್ಲಿರುವ ಮಕ್ಕಳಿಗೆ ಉಚಿತವಾಗಿ ಕಟಿಂಗ್ ಮಾಡುವ ಮೂಲಕ ಚಾಲೆಂಜಿಂಗ್ ಸ್ಟಾರ್ ನ ಜನ್ಮದಿನವನ್ನು ಆಚರಿಸಿದರು. ಇದೇ ವೇಳೆ 30ಕ್ಕೂ ಹೆಚ್ಚು ಮಕ್ಕಳಿಗೆ ಹೊದಿಕೆಯನ್ನು ವಿತರಿಸಿದರು. ಅವರಿಂದಲೇ ಕೇಕ್ ಕತ್ತರಿಸಿ ದರ್ಶನ್ ಅವರಿಗೆ ಒಳ್ಳೆಯದಾಗಲೆಂದು ಹಾರೈಸಲಾಯಿತು. ಜನ್ಮದಿನದ ಅಂಗವಾಗಿ ಮಕ್ಕಳಿಗೆ ಬಿರಿಯಾನಿ ಊಟ ಮಾಡಿಸಿದರು.

ಮೂಲತಃ ಆಂಧ್ರಪ್ರದೇಶದ ಓಂಕಾರ್, ಹಲವು ವರ್ಷದಿಂದ ಮಂಡ್ಯ ನಗರದಲ್ಲಿ ಸಲೂನ್ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಪ್ರತಿ ವರ್ಷ ದರ್ಶನ್ ಜನ್ಮದಿವನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವೇಳೆ ಮಾತನಾಡಿದ ಓಂಕಾರ್, ದರ್ಶನ್ ಅವರ ವ್ಯಕ್ತಿತ್ವ ಮತ್ತು ಸರಳತೆ ನನಗೆ ಇಷ್ಟ. ಅವರ ಗುಣವನ್ನು ಅನುಸರಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ಜನ್ಮದಿನ ಆಚರಿಸಿ ನನ್ನಿಂದಾಗುವ ವಸ್ತುಗಳನ್ನು ವಿತರಿಸುತ್ತೇನೆ. ಆದರೆ ಈವರೆಗೂ ಅವರನ್ನು ಭೇಟಿ ಮಾಡಲು ಸಾಧ್ಯವಾಗದಿರುವುದು ಬೇಸರದ ವಿಷಯ ಎಂದರು.

Click to comment

Leave a Reply

Your email address will not be published. Required fields are marked *