ಮಂಡ್ಯ: ಕೋವಿಡ್ ಕೇರ್ ಸೆಂಟರ್ ನಲ್ಲಿ ಮೂಲಭೂತ ಸೌಕರ್ಯದ ವಿಚಾರಕ್ಕೆ ಸಂಬಂಧಿಸಿ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಸಚಿವ ನಾರಾಯಣಗೌಡ ನಡುವೆ ಜಟಾಪಟಿ ನಡೆದಿದೆ.
ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಕೊರೊನಾ ವಿಚಾರಕ್ಕೆ ಸಂಬಂಧಿಸಿ ಸಚಿವರ ವಿರುದ್ಧ ವಾಗ್ದಾಳಿ ನಡಸಿದ್ದರು. ಇದಕ್ಕೆ ತಿರಗೇಟು ನೀಡಿದ ಸಚಿವ ನಾರಾಯಣಗೌಡ ಅವರು, ಒಬ್ಬ ಶಾಸಕನಾಗಿ ಏನೇನು ಕೆಲಸ ಮಾಡಬೇಕು ಎಂದು ಟ್ರೈನಿಂಗ್ ತೆಗೆದುಕೊಳ್ಳಲಿ. ನಾನು 3 ಬಾರಿ ಗೆದ್ದಿದ್ದೀನಿ ಎಂದರೆ 15 ವರ್ಷದ ಅನುಭವ ಇದೆ. ಅನುಭವನೂ ಕೌಂಟ್ ಆಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕೋವಿಡ್ ಹಣ ಲೂಟಿ ಮಾಡಿದರೇ ಅದಕ್ಕೆ ಸಾಕ್ಷಿ ಕೊಡಿ. ನನ್ನ ಬಗ್ಗೆ ಟೀಕೆ ಮಾಡಿದರೆ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಬೇಕಾಗುತ್ತದೆ. ನನ್ನ ಮೇಲೆ ಕೊಚ್ಚೆ ಹಾರಿಸಿದರೆ ನಿಮ್ಮ ಮೇಲಿನ ಆರೋಪದ ಬಗ್ಗೆ ಮಾತಾಡುತ್ತೇನೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಖಡಕ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಓಮಿಕ್ರಾನ್ ಹರಡುತ್ತೆ, ಬೂಸ್ಟರ್‌ನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ: ICMR ವೈದ್ಯ
Advertisement
Advertisement
ನಿನ್ನೆ ಸುದ್ದಿಗಾರರೊಂದಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ನಾರಾಯಣಗೌರ ಮನೆಯಲ್ಲಿ 50 ಮಂದಿ ಒಂದೇ ಬಾತ್ ರೂಂ ಬಳಸುತ್ತಾರಾ?. ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ವೈಫಲ್ಯ ಎದ್ದು ಕಾಣುತ್ತಿದೆ. ಸಚಿವ ನಾರಾಯಣ ಗೌಡರು 3 ಬಾರಿ ಶಾಸಕರಾಗಿದ್ದಾರೆ. ಆದರೆ ಅರ್ಹತೆ ಮೇಲೆ ಗೆಲ್ಲುವುದು ಬೇರೆ, ಅದೃಷ್ಟದ ಮೇಲೆ ರಾಜಕಾರಣ ಮಾಡೋದೇ ಬೇರೆಯಾಗಿದೆ. ಅವರು ಮೇಲ್ಮನೆಯಲ್ಲಿ ಸಚಿವರ ಯೋಗ್ಯತೆ ಹರಾಜು ಹಾಕಿದ್ದಾರೆ. ನಾರಾಯಣಗೌಡ ಮಂಡ್ಯ ಜಿಲ್ಲೆಯ ಮರ್ಯಾದೆ ತೆಗೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಮುಗಿಯದ ಕೇಸರಿ ಶಲ್ಯ ವಿವಾದ – ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳ ಗಲಾಟೆ