ಮಂಡ್ಯ: ತರಬೇತಿ ವೇಳೆ ಮರದ ಮೇಲಿಂದ ಬಿದ್ದು ಪೇದೆ ಸಾವು

Public TV
0 Min Read
mnd death

ಮಂಡ್ಯ: ತರಬೇತಿಯಲ್ಲಿದ್ದ ಪೇದೆಯೊಬ್ಬರು ಮರದಿಂದ ಮೇಲಿಂದ ಬಿದ್ದು ಮೃತಪಟ್ಟಿರುವ ಘಟನೆ ನಗರದ ಡಿಎಆರ್ ಮೈದಾನದಲ್ಲಿ ನಡೆದಿದೆ.

ಬಿಜಾಪುರ ಮೂಲದ ಭಾಷಾ ಸಾಬ್ ನದಾಫ್(23) ಮೃತ ದುರ್ದೈವಿ. ತರಬೇತಿ ವೇಳೆ ಭಾಷಾ ಸಾಬ್ ನೇರಳೆ ಹಣ್ಣು ಕೀಳಲು ಮರಕ್ಕೆ ಹತ್ತಿದ್ದು, ಕಾಲು ಜಾರಿ ಮರದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಭಾಷಾ ಸಾಬ್ ಸ್ನೇಹಿತರು ಅವರನ್ನ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಭಾಷಾ ಸಾಬ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಭಾಷಾ ಸಾಬ್ ಒಂದು ವಾರದ ಹಿಂದೆ ತರಬೇತಿಗಾಗಿ ನಗರಕ್ಕೆ ಆಗಮಿಸಿದ್ದರು. ಈ ಸಂಬಂಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article