ಮಂಡ್ಯ: ಮಂಡ್ಯದ (Mandya) ಗತ್ತು ಇಂಡಿಯಾಗೆ ಗೊತ್ತು ಎಂಬ ಮಾತಿದೆ. ಈ ಮಾತು ಬಂದಿರೋದೆ ಇಲ್ಲಿನ ರಾಜಕೀಯ ಚಟುವಟಿಕೆಗಳಿಂದ. ಈ ಬಾರಿಯ ಲೋಕಸಭಾ ಚುನಾವಣೆಯೂ (Lok Sabha Election) ಸಹ ಮಂಡ್ಯದಲ್ಲಿ ಅದೇ ರೀತಿ ಸದ್ದು ಮಾಡುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು (Star Chandru) ಸ್ಪರ್ಧೆ ಮಾಡುತ್ತಿದ್ದಾರೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಮಂಡ್ಯದಲ್ಲಿ ಉಮೇದುವಾರಿಕೆ ಸಲ್ಲಿಕೆ ಮಾಡಲಿದ್ದಾರೆ.
Advertisement
ಇಂದು (ಏ.1) ಬೆಳಗ್ಗೆ 9 ಗಂಟೆಗೆ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮಂಡ್ಯದ ಆದಿದೇವತೆ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ನಾಮಪತ್ರ (Nomination Paper) ಇಟ್ಟು ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೆವಾಲ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಭಾಗಿಯಾಗಲಿದ್ದಾರೆ. ಬಳಿಕ ಕಾಳಿಕಾಂಬ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ಮೂಲಕ ತೆರಳಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮೆರವಣಿಗೆ ವೇಳೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಲ್ಲಿ ಕೈ ನಾಯಕರು ಇದ್ದಾರೆ. ಇದನ್ನೂ ಓದಿ: 15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆ – 100+ ಯೂನಿಟ್ ಬಳಸುವವರಿಗೆ ಲಾಭ
Advertisement
Advertisement
ಒಂದು ಕಡೆ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಸೋದು ಮುಖ್ಯ ವಿಚಾರ ಆದರೆ ಇನ್ನೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಮಂಡ್ಯ ಜಿಲ್ಲೆಗೆ ಆಗಮಿಸುತ್ತಿರುವುದು ಗಮನಸೆಳೆಯಲಿದೆ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಕೈ ಹಿಡಿದು ನಾವು ನಿಜವಾದ ಜೋಡೆತ್ತು ಎಂದು ನಿಖಿಲ್ ಪರ ಡಿಕೆಶಿ ಪ್ರಚಾರ ಮಾಡಿದ್ದರು. ಇದೀಗ ಅದೇ ಹೆಚ್‌ಡಿಕೆ ವಿರುದ್ಧ ತಮ್ಮ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಲು ಡಿಕೆ ಶಿವಕುಮಾರ್ ಮಂಡ್ಯ ಅಖಾಡ ಪ್ರವೇಶ ಮಾಡಲಿದ್ದಾರೆ. ಈ ವಿಚಾರ ಸದ್ಯ ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಆರ್‌ಎಸ್‌ಎಸ್ ವಿಷ ಇದ್ದಂತೆ, ಟೇಸ್ಟ್ ನೋಡೋಕೆ ಯತ್ನಿಸಿದ್ರೆ ಸಾಯ್ತಿರಾ: ಮಲ್ಲಿಕಾರ್ಜುನ ಖರ್ಗೆ
Advertisement
ಒಟ್ಟಾರೆ ಇಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿಗೆ ಠಕ್ಕರ್ ಫೈಟ್ ನೀಡಲು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇನ್ನೂ ಡಿಕೆಶಿ ಹೆಚ್‌ಡಿಕೆ ವಿರುದ್ಧ ಏನೆಲ್ಲಾ ವಾಗ್ದಾಳಿ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ. ಇದನ್ನೂ ಓದಿ: ಮತ್ತೆ ಮದುವೆಯಾಗಬೇಕಿದ್ದರೆ ಚುನಾವಣೆಗೆ ಮುಂಚೆಯೇ ಆಗಿಬಿಡಿ, ಇಲ್ಲಾಂದ್ರೆ ಜೈಲು ಗ್ಯಾರಂಟಿ; ಅಸ್ಸಾಂ ಸಿಎಂ ವಾರ್ನಿಂಗ್!