ಮಂಡ್ಯ: ಜಿಲ್ಲೆಯಲ್ಲಿ ನಡೆದಿದ್ದ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಪರಿಹಾರ ಹಣ ತಂದ ಕ್ರೆಡಿಟ್ ಪಡೆಯುವ ಕುರಿತು ಸಂಸದೆ ಸುಮಲತಾ ಹಾಗೂ ಜೆಡಿಎಸ್ ಕಾರ್ಯಕರ್ತರ ಫೈಟ್ ಮಧ್ಯೆ ಇದೀಗ ಮಾಜಿ ಸಂಸದ ಶಿವರಾಮೇಗೌಡ ಎಂಟ್ರಿ ಕೊಟ್ಟಿದ್ದಾರೆ.
ಸುಮಲತಾ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ವಾಕ್ಸಮರ ಮಧ್ಯೆ ಶಿವರಾಮೇಗೌಡ ಅವರ ಟ್ವೀಟ್ ಅಚ್ಚರಿ ಮೂಡಿಸಿದೆ. ‘ಕೇಂದ್ರಕ್ಕೆ ಪರಿಹಾರ ಹಣಕ್ಕಾಗಿ ಒತ್ತಾಯಿಸಿದ್ದು ನಾನು’ ಎಂದು ಮಾಜಿ ಸಂಸದರು ಟ್ವೀಟ್ ಮಾಡಿದ್ದಾರೆ. ಪರಿಹಾರ ಕೋರಿ ಕೇಂದ್ರಕ್ಕೆ ಪತ್ರ ಬರೆದವನು ನಾನು, ಹಣ ಬಂದಿದ್ದು ಎರಡು ತಿಂಗಳ ಹಿಂದೆ ಎಂದು ಶಿವರಾಮೇಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಬಸ್ ದುರಂತ ಕೇಂದ್ರ ಸರ್ಕಾರದಿಂದ ನೆರವು- ನನಗೆ ಕ್ರೆಡಿಟ್ ಬೇಡ ಎಂದ ಸುಮಲತಾ
Advertisement
ಮಂಡ್ಯಜಿಲ್ಲೆಯ ಪಾಂಡವಪುರ ತಾ, ಕನಗನಮರಡಿ ಗ್ರಾಮದಲ್ಲಿ 24/11/2018 ರ ಭೀಕರ ಬಸ್ ದುರಂತ@publictvnews @tv9kannada @Samayanews24x7 @prajaatv @News18Kannada @btvnewslive @MediaJds @Jds_news pic.twitter.com/epGiVd65f3
— LR Shivarame Gowda (@LRSMandyaExMP) June 13, 2019
Advertisement
ಮಂಡ್ಯದ ಕನಗನಮರಡಿ ಗ್ರಾಮದಲ್ಲಿ ನವೆಂಬರ್ 24ರಂದು ಭೀಕರ ಬಸ್ ದುರಂತ ಸಂಭವಿಸಿತ್ತು. ಘಟನೆಯಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ವೇಳೆ ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡಿತ್ತು. ಇದೀಗ ಕೇಂದ್ರ ಸರ್ಕಾರವೂ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡಿದೆ.
Advertisement
Advertisement
ಕೇಂದ್ರದ ಪರಿಹಾರ ಹಣದ ವಿಚಾರವಾಗಿ ವಾದ ವಿವಾದಗಳು ಆರಂಭವಾಗಿದ್ದು, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರಧಾನಿ ಮೋದಿ ಬಳಿ ಮಾತನಾಡಿ ಪರಿಹಾರ ಹಣ ಬಿಡುಗಡೆ ಮಾಡಿಸಿದ್ದಾರೆ ಎಂದು ಸುಮಲತಾ ಬೆಂಬಲಿಗರು ಹೇಳುತ್ತಿದ್ದಾರೆ. ಕೇಂದ್ರದಿಂದ ಪರಿಹಾರ ಹಣ ತಂದಿದ್ದು ಮುಖ್ಯಮಂತ್ರಿ ಹಾಗೂ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಎಂದು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಈ ಮಧ್ಯೆ ಇದೀಗ ಶಿವರಾಮೇಗೌಡ ಎಂಟ್ರಿ ಕೊಟ್ಟಿದ್ದು, ಕೇಂದ್ರಕ್ಕೆ ಪತ್ರ ಬರೆದು ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿದ್ದು ನಾನು ಎಂದು ಮಾಜಿ ಸಂಸದ ಶಿವರಾಮೇಗೌಡ ಟ್ವೀಟ್ ಮಾಡಿದ್ದಾರೆ
https://www.youtube.com/watch?v=XpZzL4RaCWk