ಮಂಡ್ಯ: ಜಿಲ್ಲೆಯ ಪಂಡಾವಪುರ ಬಳಿಕ ನಡೆದ ಬಸ್ ದುರಂತದಲ್ಲಿ ಬಾಲಕ ಲೋಹಿತ್ ಸೇರಿದಂತೆ, ಗಿರೀಶ್ ಬದುಕಿ ಬಂದಿದ್ದಾರೆ.
ಬಸ್ ನಾಲೆಗೆ ಉರುಳಿ ಬಿದ್ದ ಬಳಿಕ ಬದುಕಿ ಬಂದ ಗಿರೀಶ್ ಪಬ್ಲಿಕ್ ಟಿವಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಬಸ್ ನ ಹಿಂಭಾಗದಲ್ಲಿ ಕುಳಿತ್ತಿದ್ದ ಕಾರಣ ಬಸ್‍ನಿಂದ ಹೊರ ಬರಲು ಸಾಧ್ಯವಾಯಿತು. ಬಸ್ ಉರುಳುತ್ತಿದಂತೆ ಕಿಟಕಿ ಗಾಜು ಒಡೆದು ಹೊರ ಬಂದೆ. ಈಜು ಬಂದ ಕಾರಣ ದಡಕ್ಕೆ ಬಂದ ಕೂಡಲೇ ಲೋಹಿತ್ ಮೇಲಕ್ಕೆ ಬಂದ, ಅದ್ದರಿಂದ ಅವರನ್ನು ರಕ್ಷಣೆ ಮಾಡಿದೆ. ಆದರೆ ನನ್ನನ್ನು ಆ ಅಂಜನೇಯನೇ ರಕ್ಷಣೆ ಮಾಡಿದ ಆದರೆ ಇತರನ್ನು ರಕ್ಷಣೆ ಮಾಡಲು ಆಗಲಿಲ್ಲ ಬೇಸರ ವ್ಯಕ್ತಪಡಿಸಿದರು.
ನಾನು ಬಸ್ ಹೊರ ಬರುತ್ತಿದಂತೆ ಬಾಲಕನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಯಿತು. ನಮ್ಮ ಊರಿನವರೇ 15 ಜನರಿದ್ದರು. ಆದರೆ ನನ್ನ ಕಣ್ಣ ಮುಂದೆಯೇ ಎಲ್ಲರನ್ನೂ ಕಳೆದುಕೊಂಡೆ. ಆದರೆ ಬಸ್ ಕಂಡಕ್ಟರ್ ಬಸ್‍ನಿಂದ ಬದುಕಿ ಬಂದಿದ್ದು, ಕಾಲುವೆಯಿಂದ ಈಜಿ ಬಂದ ಬಳಿಕ ಸ್ಥಳದಿಂದ ಪರಾರಿಯಾದ ಎಂದು ತಿಳಿಸಿದರು.
ಬಸ್ ಉರುಳಿದ 10 ನಿಮಿಷದ ಬಳಿಕ ಸ್ಥಳೀಯರು ಆಗಮಿಸಿ ರಕ್ಷಿಸುವ ಪ್ರಯತ್ನ ಮಾಡಿದರು. ಆದರೆ ಆಗಾಗಲೇ ಬಸ್ ಮೇಲೆ ಒಂದು ಅಡಿ ನೀರು ಇತ್ತು. ಬಸ್ಸಿನಲ್ಲಿ 5 ಶಾಲಾ ಮಕ್ಕಳು ಸೇರಿದಂತೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನಮ್ಮ ಗ್ರಾಮದ 15 ಜನರು ಇದ್ದರು. ಸದ್ಯ ಊರಿನಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಬಸ್ ಉರುಳಿ ಬಿದ್ದ ಸ್ಥಳದಲ್ಲಿ ಯಾವುದೇ ತಿರುವು ಇಲ್ಲ. ಆದರೆ ಏಕೆ ಬಸ್ ಕಾಲುವೆಗೆ ಉರುಳಿತು ಎಂಬುವುದೇ ತಿಳಿಯಲಿಲ್ಲ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಗ್ರಾಮಸ್ಥರು ಕೂಡ ಪ್ರಯಾಣಿಕರನ್ನು ಬದುಕಿಸುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv