ಮಂಡ್ಯ: ಪ್ರಧಾನಿ ಮೋದಿ ಅವರ ನೋಟು ನಿಷೇಧ ಕ್ರಮವನ್ನು ವಿರೋಧಿಸುವ ಸಲುವಾಗಿ ಅವರನ್ನು ಭೂತಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದ ಮಾಜಿ ಸಂಸದೆ ರಮ್ಯಾ ಅವರಿಗೆ ತಾಯತ ಹಾಗೂ ಪ್ಯಾಂಪರ್ಸ್ ಕಳುಹಿಸಿ ಕೊಡುವ ಮೂಲಕ ಮಂಡ್ಯ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ ಮೋದಿ ಅವರನ್ನು ಭೂತಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದ ರಮ್ಯಾ ಅವರ ಕ್ರಮವನ್ನು ಪ್ರತಿಭಟನಕಾರರು ತೀವ್ರವಾಗಿ ಖಂಡಿಸಿದರು. ಪ್ರಧಾನಿ ಮೋದಿ ಅವರು ನೋಟು ನಿಷೇಧ ಮಾಡಿರುವುದರಿಂದ ಭಯೋತ್ಪದನೆಗೆ ಹಣವನ್ನು ಕೊಡುತ್ತಿದ್ದ ದುಷ್ಕರ್ಮಿಗಳು ಹಾಗೂ ಕಪ್ಪು ಹಣವನ್ನು ಸಂಗ್ರಹಿಸಿದ್ದ ಸಿರಿವಂತರಿಗೆ ನಿಜವಾಗಿಯೂ ಭೂತವಾಗಿ ಕಾಣಿಸುತ್ತಿದ್ದಾರೆ. ಅದರಿಂದ ನಾವು ಅವರಿಗೆ ಪ್ಯಾಂಪರ್ಸ್ ಹಾಗೂ ದೇವರ ತಾಯತವನ್ನು ಕಳುಹಿಸಿಕೊಡುತ್ತಿರುವುದಾಗಿ ಹೇಳಿದರು.
Advertisement
ನೋಟು ನಿಷೇಧ ಮಾಡಿರುವುದರಿಂದ ಭಯೋತ್ಪಾದನೆ, ಮತಾಂತರಕ್ಕೆ ಹರಿದು ಬರುತ್ತಿದ್ದ ಬೇನಾಮಿ ಹಣಕ್ಕೆ ಕಡಿವಾಣ ಬಿದ್ದಿದೆ. ಆರ್ಥಿಕ ತಜ್ಞರು, ವಿಶ್ವಸಂಸ್ಥೆ ನಿಷೇಧದ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ. ಹೀಗಿರುವಾಗ ರಮ್ಯಾ ಅವರಿಗೆ ಭಯ ಯಾಕೆ? ಈ ಕೂಡಲೇ ರಮ್ಯಾ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು. ಒಂದು ವೇಳೆ ನೋಟು ನಿಷೇಧದಿಂದ ಯಾರಿಗಾದರೂ ಭಯ ಆದರೆ ಅವರಿಗೆ ಕೊಡಲು ಪ್ಯಾಂಪರ್, ತಾಯತಗಳನ್ನ ನೀಡಲು ಅಂಚೆ ಮೂಲಕ ರಮ್ಯಾ ಅವರಿಗೆ ಕಳುಹಿಸಿದ್ದೇವೆ ಎಂದು ತಿಳಿಸಿದರು.
Advertisement
#HappyHalloween2017 pic.twitter.com/I3YfWQzAkD
— Ramya/Divya Spandana (@divyaspandana) October 31, 2017
Advertisement
Advertisement