ಮಂಡ್ಯ: ಜಿಲ್ಲೆಯ 7 ಕ್ಷೇತ್ರಗಳ ಪೈಕಿ ನಾಲ್ಕೈದು ಕ್ಷೇತ್ರಗಳಲ್ಲಿ ಬಿಜೆಪಿ (BJP) ಗೆಲವು ಪಡೆಯಲು ಸರ್ಕಸ್ ಮಾಡುತ್ತಿದ್ದು, ಡಿ. 20ರೊಳಗೆ ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಬಿಜೆಪಿ ಮಾಸ್ಟರ್ ಮೈಂಡ್‌ಗಳು ಎಂಟ್ರಿ ಕೊಡಲಿದ್ದಾರೆ.
ಮಂಡ್ಯ ಜಿಲ್ಲೆಯ ಚುನಾವಣೆಯ ಉಸ್ತುವಾರಿ ಜವಾಬ್ದಾರಿಯನ್ನು ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್‌ಗೆ (Krishan Pal Gurjar) ಬಿಜೆಪಿ ನೀಡಿದೆ. ಕ್ರಿಶನ್ ಪಾಲ್ ಗುರ್ಜರ್ ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿದ್ದು, ಈ ಹಿಂದೆ ಹಲವು ರಾಜ್ಯದಲ್ಲಿ ಚುನಾವಣೆಯ ಉಸ್ತುವಾರಿ ವಹಿಕೊಂಡು ಅಲ್ಲಿ ಬಿಜೆಪಿ ಗೆಲುವಿಗೆ ಕಾರಣರಾಗಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ಕ್ರಿಶನ್ ಪಾಲ್ ಗುರ್ಜರ್‌ಗೆ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಸಹೋದರಿ JDS ಸೇರ್ಪಡೆ
Advertisement
Advertisement
ಈಗಾಗಲೇ ಎರಡು ಬಾರಿ ಮಂಡ್ಯ ಪ್ರವಾಸ ಮಾಡಿರುವ ಗುರ್ಜರ್ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇದೇ ವೇಳೆ ಮಂಡ್ಯ ಜಿಲ್ಲೆಯ ಬಿಜೆಪಿ ಮುಖಂಡರೊಂದಿಗೆ ಗೌಪ್ಯ ಸಭೆಯನ್ನು ಸಹ ಮಾಡಿದ್ದರು. ಇದೀಗ ಡಿ. 20ರೊಳಗೆ ಮತ್ತೆ ಮಂಡ್ಯಗೆ ರೀ ಎಂಟ್ರಿ ಕೊಡಲಿರುವ ಕ್ರಿಶನ್ ಪಾಲ್ ಗುರ್ಜರ್ ಈ ಬಾರಿ ಕೇವಲ ಚುನಾವಣೆ ಕೆಲಸ ಮಾಡಲಿದ್ದಾರೆ.
Advertisement
Advertisement
ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಯಾರಿಗೆ ಟಿಕೆಟ್ ನೀಡಬೇಕೆಂದು ಸಮೀಕ್ಷೆಯನ್ನು ಅವರು ಮಾಡಲಿದ್ದಾರೆ. ಕ್ರಿಶನ್ ಪಾಲ್ ಗುರ್ಜರ್ ತಂಡದ ಸಮೀಕ್ಷೆ ನಂತರ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟ್ ಅನೌನ್ಸ್ ಮಾಡಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿದ್ದರಾಮಯ್ಯನಂಥ ದ್ರೋಹಿಯನ್ನು ನಾನು ಎಂದೂ ನೋಡಿಲ್ಲ: ಈಶ್ವರಪ್ಪ