ಮಂಡ್ಯ: ಕೆರೆ ಕೋಡಿಗೆ ಕೊಚ್ಚಿ ಹೋಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಾಗಮಂಗಲ (Nagamangala) ತಾಲೂಕಿನ ಅಣೆಚನ್ನಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕಂಬದಹಳ್ಳಿ ಗ್ರಾಮದ ನಿವಾಸಿ ರಾಮಚಂದ್ರೇಗೌಡ (65) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಯೋಗೇಶ್ವರ್‌ರನ್ನ ಸೇರಿಸಿಕೊಂಡು ಚನ್ನಪಟ್ಟಣದಲ್ಲಿ ದೌರ್ಬಲ್ಯ ಒಪ್ಪಿಕೊಂಡ ಡಿಕೆಶಿ: ಸಿ.ಟಿ ರವಿ ಟಾಂಗ್
ಬೆಳ್ಳೂರಿಂದ ಬಿಂಡಿಗನವಿಲೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆರೆಕೋಡಿ ಬಿದ್ದಿದ್ದ ಹಿನ್ನೆಲೆ ರಸ್ತೆಯ ಮೇಲೆ ನೀರು ರಭಸವಾಗಿ ಹರಿಯುತ್ತಿತ್ತು. ಈ ವೇಳೆ ರಭಸದ ನೀರಿನ ನಡುವೆಯೇ ರಸ್ತೆ ದಾಟಲು ಮುಂದಾಗಿದ್ದ ಬೈಕ್ ಸವಾರ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಕೊಚ್ಚಿಕೊಂಡು ಹೋಗುವಾಗ ಹಳ್ಳದಲ್ಲಿದ್ದ ಮರವೊಂದನ್ನು ಏರಿ ಕುಳಿತಿದ್ದ. ಈ ವೇಳೆ ಸ್ಥಳೀಯರು ಹಗ್ಗ ಕೊಟ್ಟು ಆತನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ಹಗ್ಗ ಹಿಡಿಯಲು ಆಗದೇ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಮಾಡಿದಾಗ ಕೊಚ್ಚಿ ಹೋದ ಸ್ಥಳದಿಂದ ದೂರದಲ್ಲಿ ಮೃತ ದೇಹ ಪತ್ತೆಯಾಗಿದೆ.
ಸದ್ಯ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ನಾವು ಆಪರೇಷನ್ ಮಾಡಿಲ್ಲ, ಅವರೇ ಒಪ್ಪಿ ಬಂದಿದ್ದಾರೆ – ದಿನೇಶ್ ಗುಂಡೂರಾವ್