ಮಂಡ್ಯ: ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಹೋದರ ಎಂ.ಎಚ್.ಆನಂದ್ ಕುಮಾರ್ (76) ಅವರು ಹೃದಯಾಘಾತದಿಂದ ಇಂದು ವಿಧಿವಶರಾಗಿದ್ದಾರೆ.
ಆನಂದ್ ಕುಮಾರ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆನಂದ್ ಕುಮಾರ್ ಅವರು ಮೈಸೂರಿನಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇಂದು ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
Advertisement
ಆನಂದ್ ಕುಮಾರ್ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಓರ್ವ ಪುತ್ರ ಅಮೆರಿಕದಲ್ಲಿ ಇದ್ದಾರೆ. ಹೀಗಾಗಿ ಅಂತ್ಯಕ್ರಿಯೆ ಸೋಮವಾರ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Advertisement
ಅಂಬರೀಶ್ ಅವರ ಅಣ್ಣ ಡಾ. ಹರೀಶ್ (69) 2017 ನವೆಂಬರ್ 24ರಂದು ಸಾವನ್ನಪ್ಪಿದ್ದರು. ಒಂದು ವರ್ಷದ ಬಳಿಕ ಅಂದರೆ 2018 ರಲ್ಲಿ ಅಂಬರೀಶ್ ಅವರು ಕೊನೆಯುಸಿರೆಳೆದಿದ್ದರು.
Advertisement