ಮಂಡ್ಯ: ಕಳೆದ ನಾಲ್ಕು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೊಗರಹಳ್ಳಯಲ್ಲಿ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಉದಯ್‍ಕುಮಾರ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಮೊಗರಹಳ್ಳಿಯಲಿ ನಾಲ್ಕು ದಿನಗಳ ಹಿಂದೆ ಉದಯ್‍ಕುಮಾರ್ ಎಂಬಾತನನ್ನು ಕೋಲೆ ಮಾಡಿ ಕುಳ್ಳಚ್ಚಿ ವಿನಯ್ ಮತ್ತು ಧರ್ಮ ತಲೆಮರಿಸಿಕೊಂಡಿದ್ದರು. ಇಂದು ಶ್ರೀರಂಗಪಟ್ಟಣದ ತಾಲೂಕು ನ್ಯಾಯಾಲಯಕ್ಕೆ ತಾವೇ ಬಂದು ಶರಣಾಗಿದ್ದಾರೆ. ಇಂದು ವಕೀಲರ ಜೊತೆಯಲ್ಲಿ ಬಂದ ಈ ಇಬ್ಬರು ಕೊಲೆ ಆರೋಪಿಗಳು ತಾವೇ ಉದಯ್‍ಕುಮಾರ್ ಅನ್ನು ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡು ಶರಣಾಗಿದ್ದಾರೆ.
ಉದಯ್‍ಕುಮಾರ್ ಮೊಗರಹಳ್ಳಿ ಗ್ರಾಮದ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಆ ಮಹಿಳೆಗೆ ಗಂಡ ಇಲ್ಲದ ಕಾರಣ ಮುಂದಿನ ದಿನಗಳಲ್ಲಿ ಮದುವೆ ಆಗಲು ಕೂಡ ಇಬ್ಬರು ನಿರ್ಧಾರ ಮಾಡಿದ್ದರು. ಹೀಗಿರುವಾಗ ಕುಳ್ಳಚ್ಚಿ ವಿನಯ್‍ಗೆ ಇದನ್ನು ನೋಡಿ ಸಹಿಸಲಾಗದೇ, ತನ್ನ ಸ್ನೇಹಿತರೊಂದಿಗೆ ಏಕಾಏಕಿ ಮನೆಗೆ ನುಗ್ಗಿ ಉದಯ್‍ಕುಮಾರ್ ಅನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರೂ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.