ಮಂಡ್ಯ: ಫ್ಲೆಕ್ಸ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಅಧಿಕ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಆರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಗುತ್ತಲು ನಿವಾಸಿಗಳಾದ ಚಂದನ್ (27), ಅಜಯ್ ಕುಮಾರ್ ಆರ್. (21), ಹರ್ಷಿತ್‌ಗೌಡ (20), ಕಿರಣ್ (19), ಪ್ರಮೋದ್ (21), ಮಾರುತಿ ನಗರದ ನಾಗರಾಜು (23) ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು. ಇದನ್ನೂ ಓದಿ: ಹೈದರಾಬಾದ್‌ಗೆ ಸನ್‌ಸ್ಟ್ರೋಕ್, 120ಕ್ಕೆ ಆಲೌಟ್ – ಕೆಕೆಆರ್‌ಗೆ 80 ರನ್‌ಗಳ ಭರ್ಜರಿ ಗೆಲುವು
ಮಂಡ್ಯದ ಗುತ್ತಲು ಅರಕೇಶ್ವರ ನಗರ ವಿಜಯಲಕ್ಷ್ಮಿ ಟಾಕೀಸ್ ಮುಂಭಾಗದ 4ನೇ ಕ್ರಾಸ್‌ನಲ್ಲಿರುವ ಕಾಳಮ್ಮ ದೇವಸ್ಥಾನದ ಮುಂದೆ ನಂದನ್ ಎಸ್.ರಾಜು ಅವನನ್ನು 2019 ಏಪ್ರಿಲ್ 5 ರಂದು ಪ್ಲೆಕ್ಸ್ ಹಾಕಿರುವ ವಿಚಾರವಾಗಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಭಾರತಕ್ಕೆ ಅಮೆರಿಕ ಶಾಕ್ – ಔಷಧ, ತಾಮ್ರ, ಸೆಮಿಕಂಡಕ್ಟರ್‌ಗಳಿಗೆ ವಿನಾಯ್ತಿ, ಆಟೋಮೊಬೈಲ್, ಸ್ಟೀಲ್, ಚಿನ್ನಾಭರಣಗಳಿಗೆ ಬರೆ
ಅಂದಿನ ವೃತ್ತ ನಿರೀಕ್ಷಕರಾದ ತನಿಖಾಧಿಕಾರಿ ಮಂಡ್ಯ ನಗರ ವೃತ್ತದ ಸಿಪಿಐ ಮನೋಜ್ ಕುಮಾರ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ದಸ್ತಗಿರಿ ಮಾಡಿ, ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿ ನ್ಯಾಯಾಧೀಶರಾದ ನಿರ್ಮಲ ಕೆ. ಅವರು ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ – ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಭಾಗಿ