ಬೆಂಗಳೂರು: ಸಿಲಿಕಾನ್ ಸಿಟಿ ಈಗ ಕೂಲ್ ಕೂಲ್ ಆಗಿದೆ. ರಾಜಧಾನಿ ಸೇರಿದಂತೆ ಇಡೀ ರಾಜ್ಯ ಚಳಿಗಾಳಿಗೆ ತತ್ತರಿಸಿದೆ. ಬಂಗಾಳಕೊಲ್ಲಿಯಲ್ಲಿ (Bangla Kolli Cyclone) ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ (Bengaluru) ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸಂಜೆಯ ಹೊತ್ತಿಗೆ ಚಳಿಯ ಪ್ರಮಾಣ ಹೆಚ್ಚಾಗಲಿದ್ದು, 5 ದಿನ ಚಳಿಯೊಂದಿಗೆ ಮೋಡ ಕವಿದ ವಾತಾವರಣವೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ (Meteorological Departmenthttps) ತಿಳಿಸಿದೆ.
Advertisement
ಇನ್ನೂ ಮಾಂಡಸ್ ಚಂಡಮಾರುತ (Cyclone Mandus) ಕರ್ನಾಟಕ ಮೂಲಕ ಅರಬ್ಬೀ ಸಮುದ್ರದ ಕಡೆ ಹೋಗಲಿದೆ. ಈ ಚಂಡಮಾರುತದ ಎಫೆಕ್ಟ್ ದಕ್ಷಿಣ ಜಿಲ್ಲೆಗಳಿಗೆ ಉಂಟಾಗಲಿದೆ. ಇಂದು ಮತ್ತು ನಾಳೆ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಮಳೆ, ಚಳಿ ಮುಂದುವರಿಯುವ ಬಗ್ಗೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಒಂದೇ ರಾತ್ರೀಲಿ ಎರಡು ಬಾರಿ ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಪತ್ನಿಯ ಕೊಲೆ
Advertisement
Advertisement
ಇನ್ನೂ ತಮಿಳುನಾಡಿನಲ್ಲಿ (Tamilnadu) ಮಾಂಡಸ್ ಅಬ್ಬರ ಹೆಚ್ಚಾಗಿದ್ದು, ಕರ್ನಾಟಕಕ್ಕೂ ಸೈಕ್ಲೋನ್ ಎಫೆಕ್ಟ್ ತಟ್ಟಲಿದೆ. ಇಂದು ಮತ್ತು ನಾಳೆ ಕರಾವಳಿಯ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ 6 ಎಂಎಂ ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಹಲ್ಲೆಗೊಳಗಾದ ವಲಸೆ ಕಾರ್ಮಿಕ ಬಾಲಕನನ್ನು ಐಷಾರಾಮಿ ಕಾರಿನಲ್ಲಿ ಜಾಲಿ ರೈಡ್ ಮಾಡಿಸಿದ ಚಿನ್ನದಂಗಡಿ ಮಾಲೀಕ
Advertisement
ಬೆಂಗಳೂರು, ಚಾಮರಾಜನಗರ, ಕೋಲಾರ, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Yellow Alert) ಇರಲಿದೆ. ಸದ್ಯ ಬೆಂಗಳೂರಿನ ಉಷ್ಣಾಂಶ 23 ರಿಂದ 22ಕ್ಕೆ ಇಳಿಕೆಯಾಗಿದೆ ಎಂದು ಹವಾಮಾನ ಇಲಾಖೆಯಿಂದ ಮಳೆಯ ಮುನ್ಸೂಚನೆ ನೀಡಿದೆ.