Connect with us

Latest

‘ಮೊದಲು ಮಂದಿರ ನಂತರ ಸರ್ಕಾರ’ ಎಂಬ ಘೋಷವಾಕ್ಯದೊಂದಿಗೆ ಅಯೋಧ್ಯೆಗೆ ಹೊರಟ ಶಿವ ಸೈನಿಕರು

Published

on

ಮುಂಬೈ: ಶಿವಸೇನಾ ಮತ್ತು ವಿಶ್ವ ಹಿಂದೂ ಪರಿಷದ್(ವಿಎಚ್‍ಪಿ) ಕಾರ್ಯಕರ್ತರನ್ನು ಒಳಗೊಂಡ ಶಿವ ಸೈನಿಕರು `ಮೊದಲು ಮಂದಿರ-ನಂತರ ಸರ್ಕಾರ’ ಎಂಬ ಘೋಷವಾಕ್ಯದೊಂದಿಗೆ ರಾಮಜನ್ಮ ಭೂಮಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ.

ಹೌದು, 2019ರ ಲೋಕಸಭಾ ಚುನಾವಣೆಯ ಪ್ರಮುಖ ಅಸ್ತ್ರವಾಗಿರುವ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ, ಶಿವಸೇನೆ ಹಾಗೂ ವಿಎಚ್‍ಪಿ ಕಾರ್ಯಕರ್ತರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಗುರುವಾರ ಮಧ್ಯಾಹ್ನ ಮಹಾರಾಷ್ಟ್ರದ ಥಾಣೆ ರೈಲ್ವೇ ನಿಲ್ದಾಣದಲ್ಲಿ ಸಿದ್ಧವಾಗಿದ್ದ ವಿಶೇಷ ರೈಲಿನಲ್ಲಿ ಶಿವ ಸೈನಿಕರು ಅಯೋಧ್ಯೆಗೆ ಪ್ರಯಾಣ ಬೆಳೆಸಿದರು. ಕೇಸರಿ ವಸ್ತ್ರ ಧರಿಸಿದ್ದ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಪ್ರವಾಸ ಕೈಗೊಂಡಿದ್ದಾರೆ. ಈ ವಿಶೇಷ ರೈಲಿಗೆ ಆರತಿ ಬೆಳಗುವ ಮೂಲಕ ಥಾಣೆಯ ಮೇಯರ್ ಮೀನಾಕ್ಷಿ ಸಿಂಧೆ ಚಾಲನೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ಕಾರ್ಪೋರೇಟರ್ ನರೇಶ್ ಮಸ್ಕೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಭರವಸೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ ಇದುವರೆಗೂ ರಾಮ ಮಂದಿರ ಮಾತ್ರ ನಿರ್ಮಾಣವಾಗಿಲ್ಲ. ಭಗವಾನ್ ಶ್ರೀ ರಾಮನ ಮಂದಿರ ನಿರ್ಮಾಣದ ಕಾರ್ಯಕ್ಕೆ ಈಗ ಸಕಾಲ ಕೂಡಿ ಬಂದಿದೆ ಎಂದು ಹೇಳಿದ್ದಾರೆ.

ಶುಕ್ರವಾರ ರಾತ್ರಿ ಅಯೋಧ್ಯೆ ತಲುಪಲಿರುವ ಸಾವಿರಾರು ಕಾರ್ಯಕರ್ತರು, ಶನಿವಾರ ಸಂಜೆ ನಯಾ ಘಾಟ್ ನಲ್ಲಿ ಮಹಾ ಸಮಾವೇಶ ಹಾಗೂ ಮಂಗಳಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *