ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ನಿರೂಪಕಿ ಆಗಿ ನಡೆಸಿಕೊಡುತ್ತಿರುವ ಲಾಕಪ್ ರಿಯಾಲಿಟಿ ಶೋ ಬಿಟೌನ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಗ್ಬಾಸ್ ಮಾದರಿಯೇ ಇರುವ ಈ ರಿಯಾಲಿಟಿ ಶೋನಲ್ಲಿ ಅನೇಕ ವಿವಾದಾತ್ಮಕ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಈ ರಿಯಾಲಿಟಿ ಶೋ ಮೂಲಕ ಸೆಲೆಬ್ರಿಟಿಗಳು ಇಷ್ಟು ದಿನ ಮುಚ್ಚಿಟ್ಟಿದ್ದ ಕೆಲವು ಸತ್ಯಗಳನ್ನು ಒಂದೊಂದೇ ಕ್ಯಾಮೆರಾ ಮುಂದೆ ಬಾಯ್ಬಿಡುತ್ತಿದ್ದಾರೆ.
Advertisement
ಸದ್ಯ ಬಿಗ್ಬಾಸ್ ಸೀಸನ್-9ರಲ್ಲಿ ಭಾಗವಹಿಸಿ 2ನೇ ರನ್ನರ್ ಅಪ್ ಆಗಿದ್ದ ಮಾಡೆಲ್ ಕಮ್ ನಟಿ ಮಂದನಾ ಕರಿಮಿ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಕಂಗನಾ ಅವರ ಮುಂದೆ ರಿವೀಲ್ ಮಾಡಿದ್ದಾರೆ. ಇವರ ಕಥೆ ಕೇಳಿ ಸ್ವತಃ ಕಂಗನಾ ಅವರು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಇತರ ಸ್ಪರ್ಧಿಗಳು ಕೂಡ ಭಾವುಕರಾಗಿದ್ದಾರೆ.
Advertisement
Advertisement
ಮಂದನಾ ಕರಿಮಿ ಅವರು ಉದ್ಯಮಿ ಗೌರವ್ ಗುಪ್ತಾ ಅವರನ್ನು ಮದುವೆಯಾಗಿ ಕೆಲವೇ ತಿಂಗಳು ಕಳೆಯುವುದರಲ್ಲಿ ಅವರ ಸಂಸಾರದಲ್ಲಿ ಬಿರುಕು ಮೂಡಿದ್ದು, ಈ ವೇಳೆ ಖ್ಯಾತ ನಿರ್ದೇಶಕನೊಂದಿಗೆ ಗುಟ್ಟಾಗಿ ಸಂಬಂಧಹೊಂದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ
Advertisement
ನಾನು ನನ್ನ ಖಾಸಗಿ ಜೀವನದಲ್ಲಿ ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದ ವೇಳೆ ನಾನು ಗುಟ್ಟಾಗಿ ಒಂದು ಸಂಬಂಧ ಇಟ್ಟುಕೊಂಡಿದ್ದೆ. ನಾನು ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಓರ್ವ ಖ್ಯಾತ ನಿರ್ದೇಶಕನಾಗಿದ್ದ. ಆತ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುತ್ತಾನೆ. ಅನೇಕ ಜನರಿಗೆ ಅವನು ಸ್ಫೂರ್ತಿ. ನಾವಿಬ್ಬರೂ ಪ್ರೆಗ್ನಿನ್ಸಿ ಪ್ಲಾನ್ ಮಾಡಿದ್ದೇವು. ಆದರೆ ಪ್ರೆಗ್ನೆಂಟ್ ಆದಾಗ.. ಎಂದು ಹೇಳುತ್ತಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಇದನ್ನು ನೋಡಿ ಕಂಗನಾ ಕೂಡ ಕಣ್ಣೀರು ಹಾಕಿದ್ದಾರೆ. ಅಲ್ಲದೇ ಉಳಿದ ಸ್ಪರ್ಧಿಗಳು ಅಳುತ್ತಿದ್ದ ಮಂದನಾ ಕರಿಮಿ ಅವರಿಗೆ ಸಮಾಧಾನ ಹೇಳುತ್ತಾ ಬಹಳ ಎಮೋಷನಲ್ ಆಗಿದ್ದಾರೆ. ಇದನ್ನೂ ಓದಿ: ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!
ಸದ್ಯ ಲಾಕಪ್ ರಿಯಾಲಿಟಿ ಶೋ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಇಷ್ಟು ಮಾತ್ರ ರಿವೀಲ್ ಆಗಿದ್ದು, ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಎಪಿಸೋಡ್ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ.