– ಮಂಡಲ ಪೂಜೆಗೆ ಬೆಂಗಳೂರಿನ ವಿದ್ಯಾಪೀಠದಲ್ಲಿ ಕಲಿತ 150 ವಿದ್ವಾಂಸರು
ದೀಪಕ್ ಜೈನ್
Advertisement
ಉಡುಪಿ: ರಾಮಲಲ್ಲಾನ ಪ್ರತಿಷ್ಠೆ ನಂತರ ಅಯೋಧ್ಯೆಯಲ್ಲಿ 48 ದಿನದ ಮಂಡಲೋತ್ಸವ (Ayodhya Mandala Pooja) ನಡೆಯಲಿದೆ. ಜನವರಿ 23ರಿಂದ 48 ದಿನಗಳ ಕಾಲ ಮಂಡಲ ಪೂಜೆಯು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejavara Seer) ನೇತೃತ್ವದಲ್ಲಿ ನಡೆಯಲಿದೆ.
Advertisement
ರಾಮಮಂದಿರ ಪ್ರಾಣ ಪ್ರತಿಷ್ಠೆ (Ayodhya Ram Mandir) ಇದೇ ಜನವರಿ 22ರಂದು ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಅಂದರೆ ಜನವರಿ 17 ಕ್ಕೆ ಪ್ರತಿಮೆ ಕೆತ್ತಿದ ಸ್ಥಳದಿಂದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಪ್ರತಿಮೆಯನ್ನು ಸರಯೂ ನದಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಸರಯೂ ಜಲದ ಅಭಿಷೇಕ ಮಾಡಲಾಗುತ್ತದೆ. ಬಳಿಕ ಮಂದಿರದ ಕಡೆಗೆ ಪ್ರತಿಮೆ ತರಲಾಗುತ್ತದೆ. ಜನವರಿ 18- 19 -20ರಂದು ಅಯೋಧ್ಯೆಯಲ್ಲಿ ಮಹತ್ವದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಜಲಾಧಿವಾಸ, ಶಯ್ಯಾಧಿವಾಸ, ಧಾನ್ಯಾಧಿವಾಸ ಈ ಪ್ರಕ್ರಿಯೆಗಳು ನಡೆಯುತ್ತವೆ. ಇದು ಬಹಳ ಪ್ರಮುಖವಾದ ಧಾರ್ಮಿಕ ಪ್ರಕ್ರಿಯೆ ಎಂದು ‘ಪಬ್ಲಿಕ್ ಟಿವಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಹೇಳಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ ಹರಿದುಬಂದ ದೇಣಿಗೆ ಎಷ್ಟು? ಅತಿ ಹೆಚ್ಚು ದೇಣಿಗೆ ಕೊಟ್ಟವರ‍್ಯಾರು ಗೊತ್ತಾ?
Advertisement
Advertisement
150ಕ್ಕೂ ಹೆಚ್ಚು ಅರ್ಚಕರು:
ಜನವರಿ 21 ಪ್ರಾಣ ಪ್ರತಿಷ್ಠೆಗೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆ ಅಯೋಧ್ಯೆಯಲ್ಲಿ ನಡೆಯುತ್ತಿದೆ. ಹೋಮ ಹವನ, ರಾಮಲಲ್ಲಾ ಮೂರ್ತಿಗೆ ಜೀವ ತುಂಬುವ ಎಲ್ಲಾ ವಿಧಿ ವಿಧಾನಗಳನ್ನು ವೇದೋಕ್ತವಾಗಿ, ಶ್ರದ್ಧಾಪೂರ್ವಕವಾಗಿ ನೆರವೇರಿಸಲಾಗುತ್ತದೆ. ಜನವರಿ 22 ರಂದು ಅಭಿಜಿನ್ ಮಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ಆಗಲಿದೆ. 150ಕ್ಕಿಂತಲೂ ಹೆಚ್ಚಿನ ಪ್ರಧಾನ ಅರ್ಚಕರು ಸಹಾಯಕರು ಈ ಧಾರ್ಮಿಕ ಪ್ರಕ್ರಿಯೆ ಮಂಡಲೋತ್ಸವದಲ್ಲಿ ಭಾಗಿಯಾಗಲಿದ್ದಾರೆ.
48 ದಿನಗಳ ಅವಧಿಯೇ ಒಂದು ಮಂಡಲ:
ಜನವರಿ 23 ರಿಂದ ಮಂಡಲಪೂಜೆ ನಡೆಯಲಿದೆ. 48 ದಿನಗಳ ಕಾಲ ಅವಧಿಯೇ ಒಂದು ಮಂಡಲ. ಪ್ರಾಣಪ್ರತಿಷ್ಠೆಯ 48 ದಿನಗಳ ಕಾಲ ನಿತ್ಯ ಪ್ರತಿಮೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಅದಕ್ಕೆ ವೇದೋಕ್ತ ಮಹಾಮಂತ್ರದ ಮೂಲಕ ಆರಾಧನೆ ಮಾಡುತ್ತೇವೆ. ಪ್ರತಿನಿತ್ಯ ಎರಡು ಮಂತ್ರಗಳನ್ನು ಇಟ್ಟುಕೊಂಡು ಆರಾಧನೆ ಮಾಡುತ್ತೇವೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ‘ಪಬ್ಲಿಕ್ ಟಿವಿ’ಗೆ ಹೇಳಿದ್ದಾರೆ. ಇದನ್ನೂ ಓದಿ: ಸರಯೂ ನದಿ ತಟದಲ್ಲಿ 1008 ಯಜ್ಞ ಮಂಟಪ ನಿರ್ಮಾಣ – 21 ಸಾವಿರ ಯತಿಗಳಿಂದ ರಾಮನಾಮ ಮಹಾ ಯಜ್ಞ
ಮೊದಲ 44 ದಿನ 2 ಮಂತ್ರದ ಆರಾಧನೆ:
ಜಪ, ಹೋಮ, ತರ್ಪಣ ಜೊತೆಗೆ ಪ್ರತಿಮೆಗೆ ಕಲಶಾಭಿಷೇಕ ನಡೆಯುತ್ತದೆ. ಬೆಳಿಗ್ಗೆ ಯಜ್ಞ, ಯಾಗ, ಕಲಶ ಅಭಿಷೇಕ ನಡೆಯುತ್ತದೆ. ಮುಸ್ಸಂಜೆ ಬಳಿಕ ವೇದ ಪಾರಾಯಣ, ಅಷ್ಟಾದಶ ಪುರಾಣ ಪಾರಾಯಣ, ರಾಮಾಯಣ, ಮಹಾಭಾರತ ಪಾರಾಯಣ ನಡೆಯಲಿದೆ. ಮುಸ್ಸಂಜೆ ನಿತ್ಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ದೇವರ ವಿಗ್ರಹ ಇಟ್ಟು ಆರಾಧನೆ ಮಾಡಲಾಗುತ್ತದೆ. ನೃತ್ಯ, ವಾದ್ಯ ಸಹಿತ ಶೋಡಷೋಪಚಾರ ಪೂಜೆ ಜರುಗಲಿದೆ. ಮೊದಲನೇ 44 ದಿನಗಳ ಕಾಲ ಪ್ರತಿದಿನ ಎರಡು ಮಂತ್ರ ಇಟ್ಟುಕೊಂಡು ಆರಾಧನೆ ನಡೆಯುತ್ತದೆ. ಕೊನೆಯ ನಾಲ್ಕು ದಿನ ಸಹಸ್ರ ಕಲಶಾಭಿಷೇಕ ನಡೆಯುತ್ತದೆ.
ನಮ್ಮ ಬ್ರಹ್ಮಕಲಶವೇ, ಉತ್ತರ ಭಾರತದ ಕುಂಬಾಭಿಷೇಕ!
ನಮ್ಮಲ್ಲಿ ನಡೆಯುವ ಬ್ರಹ್ಮ ಕುಂಭಾಭಿಷೇಕ ಅಥವಾ ಬ್ರಹ್ಮಕಲಶವನ್ನು ಉತ್ತರ ಭಾರತದಲ್ಲಿ ಕುಂಭಾಭಿಷೇಕ ಎನ್ನುತ್ತಾರೆ. ಪ್ರಾಣ ಪ್ರತಿಷ್ಠೆಯಿಂದ 48 ದಿನಗಳ ಒಟ್ಟು ಆಚರಣೆ ಶಾಸ್ತ್ರೋಕ್ತವಾಗಿ ನಡೆಯುತ್ತದೆ. 48 ದಿನ ವೇದೋಕ್ತಕರ್ಮದಿಂದ ನಡೆಯಲಿದೆ. 48 ದಿನಗಳ ಮಂಡಲ ಪೂಜೆಯ ಜವಾಬ್ದಾರಿಯನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗೆ ವಹಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ
ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದವರು:
ವಿಶ್ವೇಶ ತೀರ್ಥರು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪಿಸಿದ್ದರು. 65 ವರ್ಷಗಳಿಂದ ಬೆಂಗಳೂರಿನ ವಿದ್ಯಾಪೀಠದಲ್ಲಿ ವಿದ್ಯಾರ್ಥಿ, ವಿದ್ವಾಂಸರು ಸೃಷ್ಟಿಯಾಗಿದ್ದಾರೆ. ರಾಜ್ಯದ ನಾನಾ ಮೂಲೆಯಲ್ಲಿರುವ, ದೇಶದ ಅನೇಕ ಕಡೆಗಳಲ್ಲಿರುವ ಇಂತಹ ವಿದ್ವಾಂಸರು ಮಂಡಲೋತ್ಸವ ಧಾರ್ಮಿಕ ಕಾರ್ಯ ನಡೆಸುತ್ತಾರೆ. ಮಂಡಲೋತ್ಸವದಲ್ಲಿ ಭಾಗಿಯಾಗ್ತಾರೆ.
400 ವೈದಿಕರು ಶಿಫ್ಟ್‌ಗಳಲ್ಲಿ ಭಾಗಿ!:
ಹೆಚ್ಚು ವಿದ್ವಾಂಸರು, ವೈದಿಕರು ಭಾಗವಹಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ದಿನ ಪ್ರತ್ಯೇಕ ಪ್ರತ್ಯೇಕವಾಗಿ ಒಟ್ಟು 400 ವೈದಿಕರು ಯಜ್ಞ ಯಾಗದಲ್ಲಿ ಭಾಗಿಯಾಗ್ತಾರೆ. ಒಂದು ದಿನ ಭಾಗಿಯಾದವರು, ಅನುಷ್ಠಾನದಲ್ಲಿ ಇದ್ದವರು ಮರುದಿನ ಇರುವುದಿಲ್ಲ. ಬದಲಿಸಿ ಹಲವರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಶಿಫ್ಟ್ ವ್ಯವಸ್ಥೆಯಲ್ಲಿ ಈ ಕಾರ್ಯಚಟುವಟಿಕೆಗಳು ನೆರವೇರಲಿವೆ ಎಂದು ಪೇಜಾವರ ಶ್ರೀಗಳು ‘ಪಬ್ಲಿಕ್ ಟಿವಿ’ಗೆ ತಿಳಿಸಿದ್ದಾರೆ. ಇದನ್ನೂ ಓದಿ: 8 ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ
ಪ್ರತಿ ದಿನ ಪ್ರತ್ಯೇಕ ವಿದ್ವಾಂಸರಿಂದ ಧಾರ್ಮಿಕ ಕಾರ್ಯಕ್ರಮ ಇರಲಿದೆ. ಪ್ರತಿದಿನ 10 ರಿಂದ 15 ವಿದ್ವಾಂಸರು ಬೇಕಾಗುತ್ತಾರೆ. ಕೊನೆಯ ನಾಲ್ಕು ದಿನಗಳ ಕಾಲ ನೂರು ಮಂದಿ ವಿದ್ವಾಂಸರು ಬೇಕಾಗುತ್ತದೆ. ಅಷ್ಟು ದಿನಗಳ ಕಾಲ ನಾನು ಅಯೋಧ್ಯೆಯಲ್ಲಿ ಇರುತ್ತೇನೆ. ಇವತ್ತು ಧಾರ್ಮಿಕ ವಿಧಿ ವಿಧಾನಗಳ ಮೇಲೆ ಉಸ್ತುವಾರಿಯನ್ನು ನೋಡಿಕೊಳ್ಳುತ್ತೇನೆ ಎಂದು ಪೇಜಾವರ ಶ್ರೀಗಳು ‘ಪಬ್ಲಿಕ್ ಟಿವಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.