ಮಂಡಕ್ಕಿಯಲ್ಲಿ ಇಡ್ಲಿ ಮಾಡಬಹುದಾ ಎಂದು ಎಲ್ಲರಿಗೂ ಅಚ್ಚರಿಯಾಗುತ್ತಿರಬಹುದು. ಆದರೆ ಇದು ನಿಜ. ಅಕ್ಕಿ, ರವೆಗಿಂತ ಸರಳವಾಗಿ ಮಂಡಕ್ಕಿಯಲ್ಲಿ ಇಡ್ಲಿ ಮಾಡಬಹುದು. ಈ ಇಡ್ಲಿಯನ್ನು ತುಂಬಾ ಸುಲಭ ವಿಧಾನದಲ್ಲಿ ಮಾಡಬಹುದು.
Advertisement
ಬೇಕಾಗಿರುವ ಪದಾರ್ಥಗಳು:
* ಮಂಡಕ್ಕಿ – 4 ಕಪ್
* ರೆವೆ – 1 ಕಪ್
* ಉಪ್ಪು – ಅರ್ಧ ಟೀಸ್ಪೂನ್
Advertisement
* ಮೊಸರು – 1 ಕಪ್
* ನೀರು (ಅಗತ್ಯವಿರುವಷ್ಟು)
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ದೊಡ್ಡ ಬಟ್ಟಲಿನಲ್ಲಿ ಮಂಡಕ್ಕಿಯನ್ನು ನೀರಿನಿಂದ ತೊಳೆಯಿರಿ. ನೀರನ್ನು ಹಿಂಡಿ ಮಂಡಕ್ಕಿಯನ್ನು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
* ಮಂಡಕ್ಕಿ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ. ಅದಕ್ಕೆ ರೆವೆ, ಉಪ್ಪು, ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಅಗತ್ಯವಿರುವಷ್ಟು ನೀರನ್ನು ಸೇರಿಸಿ, ಹಿಟ್ಟನ್ನು ತಯಾರಿಸಿ. 20 ನಿಮಿಷಗಳ ಕಾಲ ಮುಚ್ಚಿಡಿ.
* 20 ನಿಮಿಷಗಳ ನಂತರ, ಸರಿಯಾಗಿ ಹಿಟ್ಟು ಮಿಶ್ರಣವಾಗಿದೆಯೇ ಪರೀಕ್ಷಿಸಿಕೊಳ್ಳಿ.
* ಇಡ್ಲಿ ಪಾತ್ರೆಗೆ ಹಿಟ್ಟನ್ನು ಹಾಕಿ 15 ನಿಮಿಷಗಳ ಕಾಲ ಸ್ಟೀಮ್ ಮಾಡಿ.
ಅಂತಿಮವಾಗಿ, ಟೊಮೆಟೊ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಮಂಡಕ್ಕಿ ಇಡ್ಲಿಯನ್ನು ಸವಿಯಿರಿ.