ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ಕ್ಕೆ (Bigg Boss Kannada 11) ತ್ರಿವಿಕ್ರಮ್ ಮತ್ತು ಶಿಶಿರ್ ಶಾಸ್ತ್ರಿ, ಮಾನಸಾ (Manasa Tukali Santhosh) ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟ ಅನುಷಾ ರೈ, ಧರ್ಮ ಕೀರ್ತಿರಾಜ್
ತ್ರಿವಿಕ್ರಮ್ ಪದ್ಮಾವತಿ ಸೀರಿಯಲ್ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ರೆ, ಶಿಶಿರ್ ಕುಲವಧು ಸೇರಿದಂತೆ ಹಲವು ಸೀರಿಯಲ್, ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ. 8ನೇ ಮತ್ತು 9ನೇ ಸ್ವರ್ಧಿಯಾಗಿ ಆಗಮಿಸಿದ್ದಾರೆ. ಶಿಶಿರ್ (Shishir Shastry) ನರಕಕ್ಕೆ ಎಂಟ್ರಿ ಪಡೆದರೆ, ತ್ರಿವಿಕ್ರಮ್ (Trivikram) ಸ್ವರ್ಗಕ್ಕೆ ಬಂದಿದ್ದಾರೆ.
ಇತ್ತ ಮಾನಸಾ ತುಕಾಲಿ ಸಂತೋಷ್ ಅವರು ಗಿಚ್ಚಿ ಗಿಲಿಗಿಲಿ 3ರ ರನ್ನರ್ ಅಪ್ ಆಗಿದ್ದರು. ಈಗ ಬಿಗ್ ಬಾಸ್ ಮನೆಗೆ 10ನೇ ಸ್ಪರ್ಧಿಯಾಗಿ ಕಾಲಿಟ್ಟಿದ್ದಾರೆ.
ಪ್ರಸ್ತುತ ಭವ್ಯಾ ಗೌಡ, ಯಮುನಾ, ಧನರಾಜ್, ಗೌತಮಿ, ಅನುಷಾ ರೈ, ಧರ್ಮ ಕೀರ್ತಿರಾಜ್ ದೊಡ್ಮನೆ ಪ್ರವೇಶ ಪಡೆದಿದ್ದಾರೆ. ಒಟ್ಟು 17 ಸ್ಪರ್ಧಿಗಳ ಜಟಾಪಟಿ ದೊಡ್ಮನೆಯಲ್ಲಿ ನೋಡಬಹುದು.