ಬಿಗ್ ಬಾಸ್ ಮನೆಯಲ್ಲಿ ಈ ಬಾರಿಯ ವೀಕೆಂಡ್ ತುಂಬಾನೇ ವಿಭಿನ್ನವಾಗಿದೆ. ಶನಿವಾರದ (ಅ.26) ಸಂಚಿಕೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರು ಬಂದಿದ್ದರು. ಭಾನುವಾರದ (ಅ.27) ಎಪಿಸೋಡ್‌ನಲ್ಲಿ ಸೃಜನ್ ಲೋಕೇಶ್ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಅದಷ್ಟೇ ಅಲ್ಲ, ಕಿಚ್ಚ ಸುದೀಪ್ (Sudeep) ಅವರ ಅನುಪಸ್ಥಿತಿಯಲ್ಲಿ ಇಂದು ಎಲಿಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿ ನಡೆದಿದೆ. ದೊಡ್ಮನೆ ಆಟದಿಂದ ಮಾನಸಾ ಸಂತೋಷ್ (Manasa Santhosh) ಔಟ್ ಆಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇಂದಿನ ಸಂಚಿಕೆಯಲ್ಲಿ ಸೃಜನ್ ಲೋಕೇಶ್ (Srujan Lokesh) ದೊಡ್ಮನೆಗೆ ಗ್ರ‍್ಯಾಂಡ್ ಆಗಿ ಇಂಟ್ರಿ ನೀಡಿದ್ದಾರೆ. ನಟ ಸೃಜನ್ ಲೋಕೇಶ್ ಅವರು ಸ್ಪರ್ಧಿಗಳಿಗೆ ಒಂದಷ್ಟು ಟಾಸ್ಕ್ ನೀಡಿದಂತೆ ಇದೆ. ಜೊತೆಗೆ ನಾಮಿನೇಟ್ ಆಗಿರುವ ಕೆಲವು ಸ್ಪರ್ಧಿಗಳನ್ನು ಸೇವ್ ಮಾಡುವ ಕೆಲಸವನ್ನೂ ಸೃಜನ್ ಮಾಡಿದ್ದಾರೆ. ಈ ವೇಳೆ, ಸ್ಪರ್ಧಿ ಮಾನಸ ಕಣ್ಣೀರು ಇಟ್ಟಿದ್ದಾರೆ.
- Advertisement
- Advertisement
ಕೊನೆಯಲ್ಲಿ ಬಿಗ್ ಬಾಸ್ ಮನೆಗೆ ಎರಡು ಕಾರುಗಳು ಬಂದು ನಿಂತಿದ್ದು, ಅದರಲ್ಲಿ ಎಲಿಮಿನೇಟ್ ಆಗಿರುವ ಸ್ಪರ್ಧಿಗಳನ್ನು ಕರೆದುಕೊಂಡು ಹೋಗುವ ತುಣುಕನ್ನು ವಾಹಿನಿಯ ಪ್ರೋಮೋದಲ್ಲಿ ತೋರಿಸಲಾಗಿದೆ. ಹೀಗಾಗಿ ಇವತ್ತಿನ ಎಲಿಮಿನೇಷನ್ ಪ್ರಕ್ರಿಯೆ ತುಂಬಾನೇ ಡಿಫರೆಂಟ್ ನಡೆದಿದ್ದು, ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದೆ. ಇದನ್ನೂ ಓದಿ:ಕಾರವಾರ | ದೇವಬಾಗ್ ಕಡಲ ತೀರದಲ್ಲಿ ನಟ ರಮೇಶ್ ಅರವಿಂದ್
View this post on Instagram
ಬಿಗ್ ಬಾಸ್ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. 15 ಸ್ಪಧಿಗಳಲ್ಲಿ 9 ಮಂದಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ. ಭವ್ಯಾ ಗೌಡ, ಗೌತಮಿ, ಚೈತ್ರಾ, ಹಂಸ, ಮೋಕ್ಷಿತಾ, ಶಿಶಿರ್, ಸುರೇಶ್ ಹಾಗೂ ಕ್ಯಾಪ್ಟನ್ ಅವರಿಂದ ನೇರವಾಗಿ ಮಾನಸ ಹಾಗೂ ಮಂಜು ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಮಾನಸಾ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಎಲ್ಲದ್ದಕ್ಕೂ ಉತ್ತರ ಇಂದಿನ ಸಂಚಿಕೆಯಲ್ಲಿ ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.