ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Season 11) ಮನೆಯಿಂದ ಮಾನಸಾ ಎಲಿಮಿನೇಟ್ ಆಗಿದ್ದಾರೆ. ಸದಾ ಕಿರಿಕ್‌ನಿಂದಲೇ ಸದ್ದು ಮಾಡುತ್ತಿದ್ದ ತುಕಾಲಿ ಸಂತೋಷ್ ಪತ್ನಿಗೆ ದೊಡ್ಮನೆಯ ಆಟ ಅಂತ್ಯವಾಗಿದೆ.
ಈ ಬಾರಿ ಬಿಗ್ ಬಾಸ್‌ಗೆ ಸಂತೋಷ್ ಪತ್ನಿ ಮಾನಸಾ (Manasa) ಬಂದಿದ್ದಾರೆ ಎಂದರೆ ಹಾಸ್ಯಕ್ಕೆ ಕೊರತೆ ಇಲ್ಲ ಎಂದು ಫ್ಯಾನ್ಸ್ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ, ದೊಡ್ಮನೆಯಲ್ಲಿ ಒಂದಲ್ಲಾ ಒಂದು ಜಗಳದಿಂದಲೇ ಮಾನಸಾ ಹೈಲೆಟ್ ಆಗಿದ್ದರು. ಮನರಂಜನೆಗಿಂತ ಕಿರಿಕ್ ಮಾಡೋದ್ರಲ್ಲಿ ಮುಂದು ಎಂದು ಫ್ಯಾನ್ಸ್ ದೂರಿದ್ದರು. ಈಗ ನಟಿಯ ಆಟಕ್ಕೆ ಬಿಗ್ ಬಾಸ್ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದ ಗುರುಪ್ರಸಾದ್ ಅಂತ್ಯಕ್ರಿಯೆ
ಕಳೆದ ವಾರ ಸುದೀಪ್ ಅನುಪಸ್ಥಿತಿಯಲ್ಲಿ ಯೋಗರಾಜ್ ಭಟ್ ಅತಿಥಿಯಾಗಿ ಬಂದಾಗ ಅವರು ಕೂಡ ಮಾನಸಾಗೆ ಬುದ್ಧಿ ಹೇಳಿದ್ದರು. ಮಾತನಾಡುವ ವೈಖರಿ ಬದಲಿಸಿಕೊಳ್ಳಿ ಎಂದು ತಿಳಿಹೇಳಿದ್ದರು. ಹನುಮಂತ ಕೂಡ ಗಂಡಸರ ಮೇಲೆ ರೇಗೋ ಹಾಗೆ ಬಂದು ಬಿಡುತ್ತಾರೆ ಅಂತ ಕಾರಣ ಕೊಟ್ಟು ನಾಮಿನೇಟ್ ಮಾಡಿದ್ದರು.
ಹಂಸ ಎಲಿಮಿನೇಷನ್ ನಂತರ ಬಿಗ್ ಬಾಸ್‌ನಿಂದ ಮಾನಸಾ ಹೊರಬಂದಿದ್ದು, ಒಂದಿಷ್ಟು ನೋಡುಗರಿಗೆ ಖುಷಿ ಕೊಟ್ಟಿದ್ದರೆ, ಮತ್ತೊಂದಿಷ್ಟು ಮಂದಿಗೆ ಬೇಸರ ಮೂಡಿಸಿದೆ. ಇದನ್ನೂ ಓದಿ: ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ