ಬೆಂಗಳೂರು: ಶನಿವಾರ ದೇಶಾದ್ಯಂತ ಹವಾ ಸೃಷ್ಟಿಸಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೆಂಟ್ ತೆಗೆದರೆ ಕಚೇರಿಗೆ ಬಾಂಬ್ ಹಾಕುತ್ತೇವೆ ಹುಷಾರ್ ಎಂದು ಭದ್ರಾವತಿಯ ಮೆಸ್ಕಾಂಗೆ ಪತ್ರವೊಂದು ಬಂದಿದೆ.
ಟಿವಿಯಲ್ಲಿ ಪ್ರಸಾರವಾಗುವ ಕೆಜಿಎಫ್ ಸಿನಿಮಾ ನೋಡಲು ಯಾವುದೇ ತೊಂದರೆಯಾಗಬಾರದೆಂದು ಭದ್ರಾವತಿ ಮೆಸ್ಕಾಂ ಕಚೇರಿಗೆ ಬಿಜೆಪಿ ಕಾರ್ಯಕರ್ತರೊಬ್ಬರ ಹೆಸರಿನಲ್ಲಿ ಪತ್ರ ಬಂದಿದೆ. ಈ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Advertisement
Advertisement
ಪತ್ರದಲ್ಲಿ ಏನಿದೆ?
ಈ ಮೂಲಕ ಕೆಇಬಿ ಮೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಸುವುದೆನೆಂದರೆ ಶನಿವಾರ ಭದ್ರಾವತಿಯಲ್ಲಿ ಕರೆಂಟ್ ಏನಾದರೂ ತೆಗೆದರೆ ನೀವು ಇರಲ್ಲ, ನಿಮ್ಮ ಕಚೇರಿನೂ ಇರಲ್ಲ. ಸುಟ್ಟು ಭಸ್ಮ ಮಾಡುತ್ತೇವೆ. ಹಾಗೇ ಶನಿವಾರ ಸಂಜೆ ಯಶ್ ನಟಿಸಿರುವ ಕೆಜಿಎಫ್ ಚಲನಚಿತ್ರ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಎಚ್.ಡಿ. ಕುಮಾರಸ್ವಾಮಿ, ಅಪ್ಪಾಜಿ ಇವರ ಕುಮ್ಮಕ್ಕಿನಿಂದ ಕರೆಂಟ್ ತೆಗೆದರೆ ನಿಮ್ಮ ಆಫಿಸ್‍ಗೆ ಸರಿಯಾದ ಬಾಂಬ್ ಹಾಕುತ್ತೇವೆ.
Advertisement
ಸೋಮವಾರ ನಿಖಿಲ್ ನಾಮಿನೇಷನ್ ದಿನ 24 ಗಂಟೆ ವಿದ್ಯುತ್ ಪೂರೈಕೆ ಮಾಡಿ ಎಂದು ಸಿಎಂ ಕುಮಾರಸ್ವಮಿ ಚೆಸ್ಕಾಂಗೆ ಸೂಚನೆ ಕೊಟ್ಟಿದ್ದರು. ಅಲ್ಲದೇ ಸುಮಲತಾ ನಾಮಿನೇಷನ್ ದಿನ ಮಂಡ್ಯದಲ್ಲಿ ಕೇಬಲ್ ಕಟ್ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.