ಹಾವೇರಿ: ಹಳ್ಳಿ ಮಕ್ಕಳೆಲ್ಲಾ ನಾಲ್ಕಕ್ಷರ ಕಲಿತು ಸಿಟಿ ಸೇರಿ ಸಾಫ್ಟ್ ವೇರ್, ಕಾಲ್ ಸೆಂಟರ್ ಹೀಗೆ ನಾನಾ ದಾರಿ ಹಿಡೀತಾರೆ. ಆದರೆ ಇಂತವರ ಮಧ್ಯೆ ರೈತರ ಮಕ್ಕಳಾಗಿ ಹುಟ್ಟಿ ತ್ರಿಬಲ್ ಡಿಗ್ರಿ ಮಾಡಿದರೂ ಮಣ್ಣಿನ ಮಕ್ಕಳಾಗಿ ಸ್ವಾವಲಂಬಿ ಜೀವನವನ್ನ ಕಟ್ಟಿಕೊಳ್ಳುವವರು ತುಂಬಾ ವಿರಳ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯ ನಿವಾಸಿ ಯಲ್ಲಪ್ಪ, ಬಿಎ, ಬಿಎಸ್‍ಸಿ ಮತ್ತು ಎಂಎ ಮಾಡಿಕೊಂಡಿದ್ದಾರೆ. ಇವರು ತ್ರಿಬಲ್ ಡಿಗ್ರಿ ಹೋಲ್ಡರ್ ಆದರೂ ಸರ್ಕಾರಿ ಕೆಲಸನೂ ಬೇಡ. ನಗರದ ಜೀವನವೂ ಬೇಡ ಅಂತಾ ಹುಟ್ಟಿದ ಊರಲ್ಲೇ ಮೊಲ ಸಾಕಾಣಿಕೆ ಮಾಡಿಕೊಂಡು ಸ್ವಾವಲಂಬಿ ಜೀವನವನ್ನ ಕಟ್ಟಿಕೊಂಡಿದ್ದಾರೆ. ಇವರ ಜೊತೆಗೆ ಗೆಳೆಯ ರುದ್ರೇಶ್ ಕೂಡ ಸಾಥ್ ನೀಡುತ್ತಿದ್ದಾರೆ.
Advertisement
ನಮ್ಮದು ಕೃಷಿ ಪ್ರಧಾನವಾದ ಕುಟುಂಬವಾಗಿದ್ದರಿಂದ ಮೆಕ್ಕೆಜೋಳ, ಹತ್ತಿ, ಶೇಂಗಾ ಹೀಗೆ ಹಲವು ಬೆಳೆಗಳನ್ನ ಬೆಳೆಯುತ್ತಿದ್ದೇವು. ಆದರೆ ಬರದಿಂದ ಕೃಷಿ ಕೈ ಕೊಟ್ಟು ಹೈನುಗಾರಿಕೆ ಮಾಡಿದೆವು. ಈಗ ಇದೇ ನಮ್ಮ ಕೈ ಹಿಡಿದಿದೆ.
Advertisement
ಮೊಲ ಸಾಕಾಣಿಕೆ ಹಾಗೂ ಲಾಭಗಳಿಕೆ ಬಗ್ಗೆ ಮಾಹಿತಿ ಪಡೆದುಕೊಂಡು, ನಾನು ಮತ್ತು ರುದ್ರೇಶ್ ಸೇರಿ 10 ಯೂನಿಟ್ ನಷ್ಟು ಮೊಲಗಳನ್ನ ಸಾಕಾಣಿಕೆ ಮಾಡುತ್ತಿದ್ದೇವೆ. ನ್ಯೂಜಿಲೆಂಡ್ ವೈಟ್, ಸೋಯಿಟ್ ಮತ್ತು ಜಿಂಜಿಲಾ ವಿದೇಶಿ ತಳಿಗಳ ಮೊಲಗಳನ್ನ ಸಾಕುತ್ತಿದ್ದೇವೆ ಅಂತ ಯಲ್ಲಪ್ಪ ಹೇಳಿದ್ದಾರೆ.
Advertisement
ಸಿಟಿ ಲೈಫ್ ನ ಜಂಜಾಟಗಳ ಮಧ್ಯೆ ದುಡ್ಡಿನ ಹಿಂದೆ ಓಡಿ ನೆಮ್ಮದಿ ಕಳೆದುಕೊಳ್ಳುವುದಕ್ಕಿಂತ ಹಳ್ಳಿಯಲ್ಲಿ ಮಣ್ಣಿನ ಮಕ್ಕಳಾಗಿ ಜೀವನ ಸಾಗಿಸುವುದು ಉತ್ತಮವಾಗಿದೆ.
Advertisement