ನವದೆಹಲಿ: ಯಾವುದೇ ವೀದೇಶ ಪ್ರಯಾಣದ ಇತಿಹಾಸ ಹೊಂದಿರದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ಕಾಣಿಸಿಕೊಂಡಿರುವುದು ದೆಹಲಿಯಲ್ಲಿ ವರದಿಯಾಗಿದೆ. ಇದು ದೇಶದಲ್ಲಿ ಪತ್ತೆಯಾಗಿರುವ 4ನೇ ಕೇಸ್ ಆಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಗೆ ಮೊದಲ ಪ್ರಕರಣವಾಗಿದೆ.
31 ವರ್ಷದ ವ್ಯಕ್ತಿ ಜ್ವರ ಹಾಗೂ ಚರ್ಮದಲ್ಲಿ ಕಂಡುಬಂದ ಗುಳ್ಳೆಗಳಿಂದ ನಗರದ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ. ಅಲ್ಲಿ ಇಂದು ಆತನಿಗೆ ಮಂಕಿಪಾಕ್ಸ್ ಇರುವುದು ಕಂಡುಬಂದಿದೆ. ಆತ ಇತ್ತೀಚೆಗೆ ಹಿಮಾಚಲ ಪ್ರದೇಶದಿಂದ ಹಿಂದಿರುಗಿದ್ದ ಎನ್ನಲಾಗಿದೆ. ಇದನ್ನೂ ಓದಿ: 75 ದೇಶಗಳಲ್ಲಿ ಮಂಕಿಪಾಕ್ಸ್ – ಜಾಗತಿಕ ತುರ್ತು ಪರಿಸ್ಥಿತಿ ಘೋಷಿಸಿದ WHO
Advertisement
Advertisement
ಕಳೆದ ವಾರದಿಂದ ಭಾರತದಲ್ಲಿ ಒಂದಾದಮೇಲೊಂದರಂತೆ ಮಂಕಿಪಾಕ್ಸ್ ಪ್ರಕರಣಗಳು ಕಂಡುಬರುತ್ತಿವೆ. ಇಂದಿನ ಪ್ರಕರಣ ಸೇರಿ 4 ಕೇಸ್‌ಗಳು ದಾಖಲಾಗಿದ್ದು, 3 ಪ್ರಕರಣಗಳು ನೆರೆಯ ಕೇರಳದಲ್ಲಿ ಪತ್ತೆಯಾಗಿವೆ. ಇದನ್ನೂ ಓದಿ: ಸಂಚಾರ ದಟ್ಟಣೆ ತಡೆಗೆ ಟ್ರಾಫಿಕ್ ಡೈವರ್ಟ್- ವರ್ಕೌಟ್ ಆಗ್ತಿಲ್ಲ ಅಂತಿದ್ದಾರೆ ಸವಾರರು!
Advertisement
ಶನಿವಾರವಷ್ಟೇ ವಿಶ್ವ ಆರೋಗ್ಯ ಸಂಸ್ಥೆ(WHO) ಮಂಕಿಪಾಕ್ಸ್ ಅನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. 75 ದೇಶಗಳಲ್ಲಿ 16,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಜಾಗತಿಕವಾಗಿ ಕಂಡುಬಂದಿದ್ದು, 5 ಮಂದಿ ಇದರಿಂದ ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.