LatestMain PostNational

ಮನೆಯಲ್ಲಿ 12 ಮತದಾರರಿದ್ದರೂ ಚುನಾವಣೆಯಲ್ಲಿ ಸಿಕ್ಕಿದ್ದು ಒಂದೇ ಮತ!

Advertisements

ಗಾಂಧಿನಗರ: ಯಾರೇ ಒಬ್ಬ ವ್ಯಕ್ತಿ ಒಂದು ನಿರ್ಧಾರವನ್ನು ತೆಗೆದುಕೊಂಡಾಗ ಅದಕ್ಕೆ ಮನೆಯವರ ಹಾಗೂ ಕುಟುಂಬದವರ ಸಹಕಾರ ಅತೀ ಮುಖ್ಯವಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿಯ ಮನೆಯಲ್ಲಿ 12 ಜನ ಮತದಾರರಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 1 ಮತವನ್ನು ಪಡೆದಿದ್ದಾರೆ.

ಗುಜರಾತ್‌ನ ವಾಪಿ ಜಿಲ್ಲೆಯ ಚಾರ್ವಾಲಾ ಗ್ರಾಮದ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ವ್ಯಕ್ತಿ ಕೇವಲ 1 ಮತವನ್ನು ಪಡೆದು ಆಶ್ಚರ್ಯ ಪಡುವಂತಹ ಸನ್ನಿವೇಶಕ್ಕೆ ಗುರಿಯಾಗಿದ್ದಾನೆ. ಅವರು ಸ್ಥಳೀಯ ಚುನಾವಣೆಯಲ್ಲಿ ಸೋತಿದ್ದು ಮಾತ್ರವಲ್ಲದೇ ತನ್ನ ಕುಟುಂಬದವರೇ ಅವರ ಪರವಾಗಿಲ್ಲ ಎನ್ನುವುದು ಆಘಾತಕಾರಿ ವಿಚಾರವಾಗಿದೆ. ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಮಾತನಾಡಲು ನನ್ನಷ್ಟು ಧೈರ್ಯ ಯಾರಿಗೂ ಇಲ್ಲ: ವರುಣ್ ಗಾಂಧಿ

ಗುಜರಾತ್‌ನ ಸಂತೋಷ್ ಎಂಬ ಅಭ್ಯರ್ಥಿ ಚುನಾವಣೆಯಲ್ಲಿ ಕೇವಲ 1 ಮತವನ್ನು ಪಡೆದಿದ್ದಾರೆ. ಅದು ಕೂಡಾ ತನ್ನ ಸ್ವಂತ ಮತ. ತನ್ನ ಮನೆಯವರು ಕೂಡಾ ತನಗೆ ಮತ ಹಾಕಿಲ್ಲ ಎಂದು ಮತ ಎಣಿಕೆ ಕೇಂದ್ರದ ಬಳಿ ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನ 8,600 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಈ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಗೊಬೆಲಪ್ಪ, ಬ್ರೋಕರಪ್ಪ: ಹೆಚ್.ಡಿ ಕುಮಾರಸ್ವಾಮಿ

Leave a Reply

Your email address will not be published.

Back to top button