ಗಾಂಧಿನಗರ: ಯಾರೇ ಒಬ್ಬ ವ್ಯಕ್ತಿ ಒಂದು ನಿರ್ಧಾರವನ್ನು ತೆಗೆದುಕೊಂಡಾಗ ಅದಕ್ಕೆ ಮನೆಯವರ ಹಾಗೂ ಕುಟುಂಬದವರ ಸಹಕಾರ ಅತೀ ಮುಖ್ಯವಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿಯ ಮನೆಯಲ್ಲಿ 12 ಜನ ಮತದಾರರಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ 1 ಮತವನ್ನು ಪಡೆದಿದ್ದಾರೆ.
ಗುಜರಾತ್‌ನ ವಾಪಿ ಜಿಲ್ಲೆಯ ಚಾರ್ವಾಲಾ ಗ್ರಾಮದ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ವ್ಯಕ್ತಿ ಕೇವಲ 1 ಮತವನ್ನು ಪಡೆದು ಆಶ್ಚರ್ಯ ಪಡುವಂತಹ ಸನ್ನಿವೇಶಕ್ಕೆ ಗುರಿಯಾಗಿದ್ದಾನೆ. ಅವರು ಸ್ಥಳೀಯ ಚುನಾವಣೆಯಲ್ಲಿ ಸೋತಿದ್ದು ಮಾತ್ರವಲ್ಲದೇ ತನ್ನ ಕುಟುಂಬದವರೇ ಅವರ ಪರವಾಗಿಲ್ಲ ಎನ್ನುವುದು ಆಘಾತಕಾರಿ ವಿಚಾರವಾಗಿದೆ. ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಮಾತನಾಡಲು ನನ್ನಷ್ಟು ಧೈರ್ಯ ಯಾರಿಗೂ ಇಲ್ಲ: ವರುಣ್ ಗಾಂಧಿ
Advertisement
Advertisement
ಗುಜರಾತ್‌ನ ಸಂತೋಷ್ ಎಂಬ ಅಭ್ಯರ್ಥಿ ಚುನಾವಣೆಯಲ್ಲಿ ಕೇವಲ 1 ಮತವನ್ನು ಪಡೆದಿದ್ದಾರೆ. ಅದು ಕೂಡಾ ತನ್ನ ಸ್ವಂತ ಮತ. ತನ್ನ ಮನೆಯವರು ಕೂಡಾ ತನಗೆ ಮತ ಹಾಕಿಲ್ಲ ಎಂದು ಮತ ಎಣಿಕೆ ಕೇಂದ್ರದ ಬಳಿ ಸಂತೋಷ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಗುಜರಾತ್‌ನ 8,600 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಈ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಗೊಬೆಲಪ್ಪ, ಬ್ರೋಕರಪ್ಪ: ಹೆಚ್.ಡಿ ಕುಮಾರಸ್ವಾಮಿ