ಚೆನ್ನೈ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಹಿಳೆಯೊಬ್ಬಳನ್ನು ಆಕೆಯ ಮಗ (Son) ಹಾಗೂ ಸೊಸೆ (Daughter In Law) ಸೇರಿ ಹತ್ಯೆಗೈದ ಘಟನೆ ತಮಿಳುನಾಡಿನ (Tamil Nadu) ತಿರುನೆಲ್ವೇಲಿಯಲ್ಲಿ ನಡೆದಿದೆ.
ಎಸ್. ಅಣ್ಣಾಮಲೈ (47) ಮತ್ತು ಪತ್ನಿ ಎ. ಅನಿತಾ (42) ಸೇರಿ ಎಸ್. ಅರಸಮ್ಮಲ್ (70) ಅನ್ನು ಹತ್ಯೆ ಮಾಡಿದ್ದಾರೆ. ಅರಸಮ್ಮಲ್ ತನ್ನ ಪತಿ ತೀರಿಕೊಂಡ ನಂತರ ತಿರುನಲ್ವೇಲಿಯ ಕೆಟಿಸಿ ನಗರದಲ್ಲಿನ ಮನೆಯಲ್ಲಿ ತನ್ನ ಮಗ ಹಾಗೂ ಸೊಸೆಯೊಂದಿಗೆ ವಾಸವಿದ್ದಳು. ಆದರೆ ಅರಸಮ್ಮಲ್ ಹಾಗೂ ಆಕೆಯ ಸೊಸೆ ಅನಿತಾ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ಆಗಾಗ ಇವರಿಬ್ಬರ ಮಧ್ಯೆ ಜಗಳವಾಗುತ್ತಿತ್ತು.
ಅಷ್ಟೇ ಅಲ್ಲದೇ ಅರಸಮ್ಮಲ್‌ನ ಜೊತೆ ಆಕೆಯ ಮಗ ಅಣ್ಣಾಮಲೈ ಕೂಡ ಆಸ್ತಿಯನ್ನು (Property) ತನ್ನ ಹೆಸರಿಗೆ ನೋಂದಣಿ ಮಾಡಬೇಕೆಂದು ಜಗಳವಾಡುತ್ತಿದ್ದನು. ಆದರೆ ಅರಸಮ್ಮಲ್‌ಳಿಗೆ ಹಾಗೆ ಮಾಡಲು ಮನಸಿರಲಿಲ್ಲ. ಇದೇ ವಿಷಯಕ್ಕೆ ಅನಿತಾ ಹಾಗೂ ಅರಸಮ್ಮಲ್ ನಡುವೆ ಜಗಳವಾಗಿತ್ತು. ಈ ವೇಳೆ ಅರಸಮ್ಮಲ್ ಅನ್ನು ಅನಿತಾ ತಳ್ಳಿದ್ದಾಳೆ. ಈ ವೇಳೆ ಅರಸಮ್ಮಲ್ ಪ್ರಜ್ಞೆ ತಪ್ಪಿದ್ದಾಳೆ. ಇದನ್ನೂ ಓದಿ: ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ
ಇದಾದ ನಂತರ ಅನಿತಾ ಹಾಗೂ ಅಣ್ಣಾಮಲೈ ಸೇರಿ ಅರಸಮ್ಮಳಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಅದಾದ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದಾರೆ. ಆದರೆ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರ ನಡೆಸಿದಾಗ ಘಟನೆಗೆ ನಿಜವಾದ ಕಾರಣ ತಿಳಿದುಬಂದಿದೆ. ಇದನ್ನೂ ಓದಿ: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು – ಬಸ್ ಚಾಲಕನಿಗೆ ಸಾರ್ವಜನಿಕರಿಂದ ಥಳಿತ