ಬೆಂಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳನ್ನು (Elephant) ನೋಡಲು ಜನರು ಜಮಾಯಿಸಿದ್ದು, ಈ ವೇಳೆ ವಿಚಲಿತವಾದ ಆನೆಗಳು ಯುವಕನೊಬ್ಬನನ್ನು (Man) ಅಟ್ಟಾಡಿಸಿ ಸಾಯಿಸಿರುವ ಘಟನೆ ಕೃಷ್ಣಗಿರಿ ಜಿಲ್ಲೆಯ ಸಪ್ಪಾನಿಪಟ್ಟಿಯಲ್ಲಿ ನಡೆದಿದೆ.
ಕಳೆದೆರಡು ದಿನಗಳಿಂದ ಸುತ್ತಮುತ್ತಲಿನ ಗ್ರಾಮಗಳ ಬಳಿ ಬೀಡುಬಿಟ್ಟ ಕಾಡಾನೆಗಳು ರೈತರು ಬೆಳೆದಿದ್ದ ತರಕಾರಿ ಬೆಳೆಗಳನ್ನು ತಿಂದು, ತುಳಿದು ಹಾಳು ಮಾಡಿದ್ದವು. ಹೊಲ-ಗದ್ದೆಗಳ ಬಳಿ ಆನೆಗಳು ಇರುವ ಮಾಹಿತಿ ತಿಳಿದು ಸೆಲ್ಫಿ ತೆಗೆಯಲು ಮುಂದಾಗಿದ್ದ ಯುವಕ ರಾಮಕುಮಾರ್ ಮೇಲೆ ಕಾಡಾನೆ ದಾಳಿ (Elephant Attack) ಮಾಡಿದೆ. ಇದರಿಂದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಗ್ಯಾಸ್ ಪೈಪ್‍ಲೈನ್ ಕಟ್ಟಾಗಿ ಭೀಕರ ಸ್ಫೋಟ- ಮನೆಗಳು ಧ್ವಂಸ, ಮೂವರಿಗೆ ಗಂಭೀರ ಗಾಯ
ಇದೇ ವೇಳೆ ಜನರು ಗುಂಪು ಗುಂಪಾಗಿ ಸೇರಿದ್ದರಿಂದ ಭಯಗೊಂಡು ಓಡಲು ಪ್ರಾರಂಭಿಸಿದ 2 ಕಾಡಾನೆಗಳು ಹೆದ್ದಾರಿ ದಾಟುತ್ತಿದ್ದಾಗ ಕಾರೊಂದಕ್ಕೆ ಡಿಕ್ಕಿ ಹೊಡೆದಿವೆ. ಇದರಿಂದ ಕಾರು ಜಖಂಗೊಂಡಿದ್ದು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಪದೇ ಪದೇ ಕಾಡಾನೆಗಳು ಗ್ರಾಮದತ್ತ ಆಗಮಿಸಿ ಜನರಿಗೆ ಪ್ರಾಣ ಭಯದ ವಾತಾವರಣ ಸೃಷ್ಟಿಸಿದೆ. ಇದೀಗ ಅವಾಂತರಗಳಿಂದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಸ್ತೆ ಮಧ್ಯೆಯೇ ಯಡಿಯೂರಪ್ಪರನ್ನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು