ಪ್ಯಾರಿಸ್: ಕೆಲಸ ಸಿಗಬೇಕೆಂದು ಮನುಷ್ಯರು ಹಲವು ಸರ್ಕಸ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನನ್ನು ವಿಚಿತ್ರವಾಗಿ ರೂಪಾಂತರಿಸಿಕೊಂಡಿದ್ದಕ್ಕೆ ಕೆಲಸವೇ ಸಿಗದೇ ಪರದಾಡುತ್ತಿದ್ದಾನೆ.
ಮೈಮೇಲೆಲ್ಲಾ ಟ್ಯಾಟೂ ಹಾಕಿಸಿಕೊಂಡು ‘ಬ್ಲ್ಯಾಕ್ ಏಲಿಯನ್’ ಆಗಿ ರೂಪಾಂತರವಾಗಿರುವ ಫ್ರೆಂಚ್‍ನ ಆಂಥೋನಿ ಲೋಫ್ರೆಡೊ ಈಗ ಎಲ್ಲಿಯೂ ಕೆಲಸ ಸಿಗುತ್ತಿಲ್ಲ ಎಂದು ಕೊರಗುತ್ತಿದ್ದಾನೆ. ಆಂಥೋನಿ ಲೋಫ್ರೆಡೊ ಹೇಗೆ ಕಾಣುತ್ತಾನೆ ಎಂಬುದರ ಆಧಾರದ ಮೇಲೆ ಜನರು ಅವನನ್ನು ನಿರ್ಣಯಿಸುತ್ತಿರುವುದರಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ತನ್ನ ದುಃಖವನ್ನು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ನಲಪಾಡ್ ಮಾಡಿರೋ ಕೃತ್ಯಕ್ಕೂ ನಮಗೂ ಸಂಬಂಧವಿಲ್ಲ: ಅಶೋಕ್ ಪಟ್ಟಣ
- Advertisement -
View this post on Instagram
- Advertisement -
ತನ್ನನ್ನು ‘ಬ್ಲ್ಯಾಕ್ ಏಲಿಯನ್’ ಎಂದು ಕರೆದುಕೊಳ್ಳುವ ಆಂಥೋನಿ ತನ್ನ ಕಣ್ಣುಗುಡ್ಡೆಗಳು ಸೇರಿದಂತೆ ಮೈಮೇಲೆ ಕಪ್ಪು ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಅದರ ಹೊರತಾಗಿ, ಪಾಪ್ ಸ್ಟೈಲ್‍ನಲ್ಲಿ ತನ್ನ ಉಡುಗೆಯನ್ನು ಬದಲಾಯಿಸಿಕೊಂಡಿದ್ದಾನೆ. ಅವನ ಎಡಗೈ ಪಂಜವನ್ನು ಹೋಲುವಂತೆ ಮಾಡಲು ಅವನ ಎರಡು ಬೆರಳುಗಳನ್ನು ಕತ್ತರಿಸಿಕೊಂಡಿದ್ದಾನೆ.
- Advertisement -
- Advertisement -
ಆಂಥೋನಿ 27ನೇ ವಯಸ್ಸಿನಲ್ಲಿ ತನ್ನ ಲುಕ್ ಬದಲಾಯಿಸಲು ಪ್ರಾರಂಭ ಮಾಡಿಕೊಂಡಿದ್ದಾನೆ. ಅದಕ್ಕೆ ಅವನಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬಳಗವೇ ಇದೆ. ಇನ್‌ಸ್ಟಾದಲ್ಲಿ 1.2 ಮಿಲಿಯನ್ ಅನುಯಾಯಿಗಳಿದ್ದಾರೆ. ಸೊಶೀಯಲ್ ಮಿಡಿಯಾದಲ್ಲಿ ಭಾರೀ ಅನುಯಾಯಿಗಳನ್ನು ಹೊಂದಿದ್ದರೂ ಸಹ ನಿಜ ಜೀವನದಲ್ಲಿ ಆಂಥೋನಿ ಅವರು ಎಷ್ಟು ವಿಚಿತ್ರವಾಗಿ ಕಾಣುತ್ತಾರೆ ಎಂಬ ಕಾರಣದಿಂದಾಗಿ ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಪ್ರತಿಭಟನಾ ಶಿಬಿರ ಧ್ವಂಸಗೊಳಿಸಿದ ಶ್ರೀಲಂಕಾ ಭದ್ರತಾ ಪಡೆ
View this post on Instagram
ಈ ಕುರಿತು ಆಂಥೋನಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಈ ರೂಪದಿಂದ ಯಾರು ನನಗೆ ಕೆಲಸ ಕೊಡುತ್ತಿಲ್ಲ. ನನ್ನ ಈ ರೂಪದಿಂದ ಬಹಳಷ್ಟು ಕೆಟ್ಟ ಸಂಗತಿಗಳು ನಡೆದಿದೆ. ಇದನ್ನು ನೋಡಿ ಕೆಲವರು ಧನಾತ್ಮಕವಾಗಿ ಅಭಿಪ್ರಾಯವನ್ನು ಕೊಡುತ್ತಿದ್ದು, ಇನ್ನೂ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ.