ಮೈಸೂರು: ನಗರದಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ವಿಕೃತ ಕಾಮಿ ಪ್ರತ್ಯಕ್ಷವಾಗಿದ್ದೇನೆ. ರಾತ್ರೋರಾತ್ರಿ ಲೇಡಿಸ್ ಹಾಸ್ಟೆಲಿಗೆ ನುಗ್ಗುವ ವಿಕೃತ ಕಾಮಿ ಹುಡುಗಿಯರ ಒಳ ಉಡುಪು ಕದ್ದು ಎಸ್ಕೇಪ್ ಆಗುತ್ತಿದ್ದಾನೆ.
ಕೆ.ಆರ್. ಆಸ್ಪತ್ರೆಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಈತ ಪ್ರತ್ಯಕ್ಷವಾಗಿದ್ದಾನೆ. ಮೂರಂತಸ್ತಿನ ನರ್ಸಿಂಗ್ ಕಾಲೇಜು ಹಾಸ್ಟೆಲ್ ನ ಕಟ್ಟಡ ಏರಿ ಒಳ ನುಗ್ಗಿ ವಿದ್ಯಾರ್ಥಿನಿಯರಲ್ಲಿ ಭೀತಿ ಮೂಡಿಸಿರುವ ಸೈಕೋ, ವಿದ್ಯಾರ್ಥಿನಿಯೊಬ್ಬಳ ರೂಂಗೆ ತಡರಾತ್ರಿ ನುಗ್ಗಿ ಮೊಬೈಲ್ ಕಸಿದುಕೊಂಡಿದ್ದಾನೆ.
Advertisement
ಸೆಕ್ಯೂರಿಟಿ ಗಾರ್ಡ್ ಮತ್ತು ಸಿಸಿಟಿವಿ ಇದ್ದರೂ ಲೆಕ್ಕಿಸದೇ ಆಳೆತ್ತರದ ಕಾಂಪೌಂಡ್ ಹಾರಿ ಈ ಸೈಕೋ ಒಳ ನುಗ್ಗಿದ್ದಾನೆ. ಶುಕ್ರವಾರದಂದು ಬೆಳಗಿನ ಜಾವ ಸುಮಾರು 3 ಗಂಟೆವರೆಗೂ ಹಾಸ್ಟೆಲ್ ನಲ್ಲೇ ಅಡ್ಡಾಡಿ ಹಾಸ್ಟೆಲ್ ನ ಆವರಣದಲ್ಲಿ ಒಣಗಲು ಹಾಕಿದ್ದ ಯುವತಿಯರ ಒಳ ಉಡುಪುಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಈತನ ವಿಕೃತ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಈ ಸೈಕೋಪಾತ್ ವರ್ತನೆಯಿಂದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ. ಈ ಬಗ್ಗೆ ದೇವರಾಜ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ವಿಕೃತ ಕಾಮಿಯ ಪತ್ತೆಗೆ ಮುಂದಾಗಿದ್ದಾರೆ.
Advertisement